ಬೆಂಗಳೂರು: ಅತ್ಯಾಚಾರ ಪ್ರಕರಣ, ಪತಿ ಪತ್ನಿ ಕಲಹ, ಲೈಂಗಿಕ ದೌರ್ಜನ್ಯ ಈ ರೀತಿ ಸಮಸ್ಯೆಯಾದಾಗ ಮೊದಲು ನೆನಪಿಗೆ ಬರೋದು ಪೊಲೀಸ್ ಸ್ಟೇಷನ್. ಆದ್ರೆ ಸ್ಟೇಷನ್ನಲ್ಲಿ ನಿಜಕ್ಕೂ ಎಲ್ಲಾ ಮಾಹಿತಿ ನೀಡಿ ದೂರು ನೀಡೋಕೆ ಆಗುತ್ತಾ ? ಈ ರೀತಿ ಸಾಕಷ್ಟು ಮಹಿಳೆಯರು ಒಳಗೊಳಗೆ ಒದ್ದಾಡಿ ದೂರು ಕೊಡದೆ ಸುಮ್ಮನಿರುವ ಅದೆಷ್ಟೋ ಉದಾಹರಣೆಗಳು ಸಿಗುತ್ತದೆ. ಆದ್ರೆ ಸದ್ಯ ಈ ಭಯಕ್ಕೆಲ್ಲಾ ಬ್ರೇಕ್ ಹಾಕೋಕೆ ಅಂತ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಅದೇ ಮಹಿಳಾ ಡೆಸ್ಕ್ ಮೂಲಕ.
ಹೌದು, ಮಹಿಳಾ ಡೆಸ್ಕ್ಗೆ ಔಟ್ ಸೋರ್ಸ್ ಮೂಲಕ ಕೆಲ ಮಹಿಳೆಯರನ್ನ ನೇಮಕ ಮಾಡಿ ಬೆಂಗಳೂರಿನಲ್ಲಿರುವ ಎಲ್ಲಾ ಠಾಣೆಗಳಲ್ಲೂ ಮಹಿಳಾ ಡೆಸ್ಕ್ ತೆರೆಯಲು ತಯಾರಿ ನಡೆಸಲಾಗಿದ್ದು, ಮಹಿಳಾ ಡೆಸ್ಕ್ ನಲ್ಲಿ ಓರ್ವ ಮಹಿಳೆ ಕೂತಿರ್ತಾರೆ. ಇವರ ಬಳಿ ಮುಕ್ತವಾಗಿ ಏನೆಲ್ಲಾ ಸಮಸ್ಯೆ ಆಗಿದೆ ಅನ್ನೋದನ್ನ ಬಿಡಿಸಿ ಹೇಳಬಹುದು ಹಾಗೆ ಪುರುಷ ಇನ್ಸ್ಪೆಕ್ಟರ್ ಅಥವಾ ಸಿಬ್ಬಂದಿ ಇದ್ರೆ ಅವರ ಬಳಿ ದೂರು ಕೊಡೋದು ಕಷ್ಟ ಅಂತ ಕೆಲ ಮಹಿಳೆಯರು ಮಹಿಳಾ ಅಧಿಕಾರಿಗಳಿಗೆ ತಿಳಿಸಿದ್ರು. ಇದೆಲ್ಲವನ್ನ ಮನಗಂಡ ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್ ಮಹಿಳೆಯರ ಈ ಸಮಸ್ಯೆಗೆ ಪರಿಹಾರವೆಂಬಂತೆ ಮಹಿಳಾ ಡೆಸ್ಕ್ ತೆರೆಯಲು ನಿರ್ಧರಿಸಿದ್ದಾರೆ.