ಕರ್ನಾಟಕ

karnataka

ETV Bharat / state

ಕೋವಿಡ್ ಪ್ರಕರಣ ಇಳಿಕೆ : ಷರತ್ತಿನೊಂದಿಗೆ ಖಾಸಗಿ ಆಸ್ಪತ್ರೆಗಳ ಬೆಡ್ ಬಿಟ್ಟು ಕೊಡಲು ನಿರ್ಧಾರ - ಖಾಸಗಿ ಆಸ್ಪತ್ರೆ

ಈಗ ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ ಅಡ್ಮಿಷನ್ ಆಗ್ತಿರೋದು 200 ಕೋವಿಡ್ ಸೋಂಕಿತರು ಮಾತ್ರ. ಒಟ್ಟಾರೆ 6,603 ಜನರಲ್ ಬೆಡ್​​ಗಳ ಪೈಕಿ 539 ಮಾತ್ರ ಭರ್ತಿಯಾಗಿವೆ. 6,064 ಬೆಡ್ ಖಾಲಿ ಇದೆ. ಹೀಗಾಗಿ, ಬೇರೆ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಕೊರತೆ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಜನರಲ್ ಬೆಡ್ ಹಂಚಿಕೆಯಲ್ಲಿ ಬೇರೆ ಬೇರೆ ಕಾಯಿಲೆಯವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 5,286 ಬೆಡ್ ಸರ್ಕಾರದ ಕೋಟಾದಿಂದ ರಿಲೀಸ್ ಮಾಡ್ತಿದ್ದೇವೆ. ಶೇ.20ರಷ್ಟು ಬೆಡ್​ಗಳನ್ನು ಉಳಿಸಿಕೊಳ್ಳಲಿದ್ದೇವೆ..

ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್

By

Published : Jun 9, 2021, 7:44 PM IST

ಬೆಂಗಳೂರು :ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿರಿಸಿದ್ದ ಸರ್ಕಾರಿ ಕೋಟಾದ ಬೆಡ್​​ಗಳನ್ನು ಬಿಟ್ಟು ಕೊಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ ವಿಧಾನಸೌಧದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಂದಾಯ ಇಲಾಖೆ ಹಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ಅಧಿಕಾರಿಗಳ ಜೊತೆಗೆ ಬೆಡ್ ವಿಚಾರಕ್ಕೆ ಸಭೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಹಾಸಿಗೆ ಹಂಚಿಕೆ ಸಂಬಂಧಿಸಿ, ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಮೆಡಿಕಲ್ ಕಾಲೇಜ್‌ ಆಸ್ಪತ್ರೆಗಳಲ್ಲಿ 11,574 ಬೆಡ್​​ಗಳನ್ನು ನೀಡಿದ್ದರು.

ಕೋವಿಡ್ ಬೆಡ್ ಲಭ್ಯತೆ ವಿವರ ಕುರಿತು ಆರ್ ಅಶೋಕ್ ಪ್ರತಿಕ್ರಿಯೆ

ಇದರಲ್ಲಿ 6,603 ಜನರಲ್ ಬೆಡ್, ಹೆಚ್‌ಡಿಯು ಬೆಡ್ 4,078, ಐಸಿಯು ಬೆಡ್ 471, ಐಸಿಯು ವಿತ್ ವೆಂಟಿಲೇಟರ್ ಬೆಡ್ 422 ಸೇರಿದೆ ಎಂದು ತಿಳಿಸಿದರು. ಕೊರೊನಾ ಪ್ರಕರಣ ಕಡಿಮೆಯಾಗಿರುವ ಕಾರಣ ಒಟ್ಟು 8,133 ಬೆಡ್​ಗಳನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದರು. ಕಳೆದ ಒಂದು ವಾರದಿಂದ ಕೋವಿಡ್ ಪಾಸಿಟಿವ್ 2,000 ಆಸುಪಾಸಿನಲ್ಲೇ ಇದೆ.

ಈಗ ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ ಅಡ್ಮಿಷನ್ ಆಗ್ತಿರೋದು 200 ಕೋವಿಡ್ ಸೋಂಕಿತರು ಮಾತ್ರ. ಒಟ್ಟಾರೆ 6,603 ಜನರಲ್ ಬೆಡ್​​ಗಳ ಪೈಕಿ 539 ಮಾತ್ರ ಭರ್ತಿಯಾಗಿವೆ. 6,064 ಬೆಡ್ ಖಾಲಿ ಇದೆ. ಹೀಗಾಗಿ, ಬೇರೆ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಕೊರತೆ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಜನರಲ್ ಬೆಡ್ ಹಂಚಿಕೆಯಲ್ಲಿ ಬೇರೆ ಬೇರೆ ಕಾಯಿಲೆಯವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 5,286 ಬೆಡ್ ಸರ್ಕಾರದ ಕೋಟಾದಿಂದ ರಿಲೀಸ್ ಮಾಡ್ತಿದ್ದೇವೆ. ಶೇ.20ರಷ್ಟು ಬೆಡ್​ಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.

ಇನ್ನು 4,078 ಹೆಚ್​​ಡಿಯು ಬೆಡ್​​ಗಳಲ್ಲಿ 1,031 ಬೆಡ್ ಭರ್ತಿಯಾಗಿದೆ‌. 3,047 ಹೆಚ್​ಡಿಯು ಬೆಡ್ ಖಾಲಿ ಇದೆ. ಇದರಲ್ಲಿ 2,855 ಬೆಡ್​​ಗಳನ್ನು ರಿಲೀಸ್ ಮಾಡಲಾಗಿದೆ. ಒಟ್ಟು 470 ಐಸಿಯು ಬೆಡ್ ಇದ್ದು, ಅದರಲ್ಲಿ 125 ಅದರಲ್ಲಿ ಬೆಡ್ ಖಾಲಿ ಇದೆ. ಐಸಿಯು ಬೆಡ್​​ಗಳನ್ನು ಬಿಟ್ಟುಕೊಟ್ಟಿಲ್ಲ. ಐಸಿಯು ವಿತ್ ವೆಂಟಿಲೇಟರ್ 422 ಬೆಡ್​​​ಗಳನ್ನೂ ಕೂಡ ಹಾಗೇ ಉಳಿಸಿಕೊಳ್ತೀವಿ ಎಂದರು.

ಸರ್ಕಾರಿ ಮೆಡಿಕಲ್ ಕಾಲೇಜ್, ಸರ್ಕಾರಿ ಆಸ್ಪತ್ರೆಗಳ ಬೆಡ್​​​ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಕೋವಿಡ್ ಮತ್ತೆ ಹೆಚ್ಚಾದರೆ ಒಂದು ವಾರದ ಒಳಗಾಗಿ ಮತ್ತೆ ಖಾಸಗಿ ಆಸ್ಪತ್ರೆ ಗಳಿಂದ ಬೆಡ್ ವಾಪಸ್ ಪಡೆಯುವ ಕಂಡೀಷನ್ ಹಾಕಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಬೆಡ್ ರಿಲೀಸ್ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಆಯಾಯ ಜಿಲ್ಲಾಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಓದಿ:ಸ್ಲಂಗಳ ಮೂಲ ಸೌಕರ್ಯಕ್ಕೆ 1 ಸಾವಿರ ಕೋಟಿ ರೂ ಬಿಡುಗಡೆ: ಸಚಿವ ವಿ.ಸೋಮಣ್ಣ

ABOUT THE AUTHOR

...view details