ಕರ್ನಾಟಕ

karnataka

ETV Bharat / state

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ನೋಟಿಸ್ ನೀಡಲು ನಿರ್ಧಾರ

ಕೃಷಿ ಇಲಾಖೆ ನೀಡುವ ಸೂಚನೆಯನ್ನಾಗಲಿ, ಸರ್ಕಾರದ ಆದೇಶವನ್ನಾಗಲೀ ಪಾಲಿಸದೇ ರೈತರಿಗೆ ಇನ್ನೂ ವಿಮೆ ಪಾವತಿಸದೇ ವಿಳಂಬ ನೀತಿ ಅನುಸರಿಸಿರುವುದು ಕಂಡು ಬಂದಿರುವುದರಿಂದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವಿರುದ್ಧ ನೋಟಿಸ್ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಪರ ಕೃಷಿ ನಿರ್ದೇಶಕ ಆಂಥೋನಿ ಎಂ. ಇ. ತಿಳಿಸಿದ್ದಾರೆ.

Decision to issue notice to United India Insurance Company
ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ನೋಟಿಸ್ ನೀಡಲು ನಿರ್ಧಾರ

By

Published : Oct 3, 2020, 7:50 PM IST

ಬೆಂಗಳೂರು:ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಕಾರಣ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ನೋಟಿಸ್​ ನೀಡಲು ಕೃಷಿ ಇಲಾಖೆ ನಿರ್ಧರಿಸಿದೆ.

ಕೃಷಿ ಇಲಾಖೆ ನೀಡುವ ಸೂಚನೆಯನ್ನಾಗಲೀ, ಸರ್ಕಾರದ ಆದೇಶವನ್ನಾಗಲೀ ಪಾಲಿಸದೇ ರೈತರಿಗೆ ಇನ್ನೂ ವಿಮೆ ಪಾವತಿಸದೇ ವಿಳಂಬ ನೀತಿ ಅನುಸರಿಸಿರುವುದು ಕಂಡು ಬಂದಿರುವುದರಿಂದ ಕಂಪನಿ ವಿರುದ್ಧ ನೋಟಿಸ್ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಪರ ಕೃಷಿ ನಿರ್ದೇಶಕ ಆಂಥೋನಿ ಎಂ. ಇ. ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಹಾಗೂ ಕೃಷಿ ಇಲಾಖೆಯ ಸಭೆಗಳಿಗೆ ಸರಿಯಾಗಿ ಹಾಜರಾಗಿ ಮಾಹಿತಿ ನೀಡದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವಿರುದ್ಧ ನೊಟೀಸ್ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಸಚಿವ ಬಿ. ಸಿ. ಪಾಟೀಲ್ ಸೂಚನೆ ನೀಡಿದ್ದರು.

ABOUT THE AUTHOR

...view details