ಕರ್ನಾಟಕ

karnataka

ETV Bharat / state

13,763 ಕೋಟಿ ಜಿಎಸ್​ಟಿ ಪರಿಹಾರ ಮೊತ್ತ ಪಡೆಯುವ ಕುರಿತು ಚರ್ಚಿಸಲು ನಿರ್ಧಾರ : ಬಸವರಾಜ ಬೊಮ್ಮಾಯಿ - Basavaraja Bommai

ವಿಡಿಯೋ ಸಂವಾದದ ಮೂಲಕ ಜಿಎಸ್​ಟಿ ಅನುಷ್ಠಾನದ ಕುರಿತಂತೆ ಐಟಿ ಗ್ರೂಪ್ ಆಫ್ ಮಿನಿಸ್ಟರ್ ಮಂಡಳಿಯ 14ನೇ ಸಭೆ ನಡೆಯಿತು. ರಾಜ್ಯದಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು..

Decision to discuss GST compensation
ಬಸವರಾಜ ಬೊಮ್ಮಾಯಿ ವಿಡಿಯೋ ಸಂವಾದ

By

Published : Aug 7, 2020, 10:57 PM IST

Updated : Aug 7, 2020, 11:29 PM IST

ಬೆಂಗಳೂರು:ರಾಜ್ಯದ ಪಾಲಿನ 13,763 ಕೋಟಿ ಜಿಎಸ್​​ಟಿ ಪರಿಹಾರ ಮೊತ್ತವನ್ನು ಪಡೆಯುವ ಕುರಿತು ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಐಟಿ ಗ್ರೂಪ್ ಆಫ್ ಮಿನಿಸ್ಟರ್ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಡಿಯೋ ಸಂವಾದ ಮೂಲಕ ಐಟಿ ಗ್ರೂಪ್ ಆಫ್ ಮಿನಿಸ್ಟರ್ ಮಂಡಳಿ ಸಭೆ

ವಿಡಿಯೋ ಸಂವಾದ ಮೂಲಕ ಜಿಎಸ್​ಟಿ ಅನುಷ್ಠಾನದ ಕುರಿತಂತೆ ಐಟಿ ಗ್ರೂಪ್ ಆಫ್ ಮಿನಿಸ್ಟರ್ ಮಂಡಳಿಯ 14ನೇ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ರಾಜ್ಯಗಳ ಸಚಿವರು ಭಾಗವಹಿಸಿದ್ದರು. ರಾಜ್ಯದಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಚರ್ಚಿಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ವಿಡಿಯೋ ಸಂವಾದ ಮೂಲಕ ಐಟಿ ಗ್ರೂಪ್ ಆಫ್ ಮಿನಿಸ್ಟರ್ ಮಂಡಳಿ ಸಭೆ

ನಿರ್ಧಾರಗಳು:

ಆನ್​ಲೈನ್​ನಲ್ಲಿ ಬಾಕಿ ಇರುವ ಮರುಪಾವತಿಯ ತೆರಿಗೆ ಮೊತ್ತವನ್ನು ಕೂಡಲೇ ತೆರಿಗೆದಾರರಿಗೆ ಯಾವುದೇ ಕಾರಣ ಹೇಳಬಾರದು ಮತ್ತು ವಿಳಂಬ ಮಾಡಬಾರದು ಎಂದು ಒತ್ತಾಯಿಸಲಾಯಿತು.

ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರು ಶೂನ್ಯ ತೆರಿಗೆ ಮೊತ್ತದ ದಾಖಲೆಗಳನ್ನು ಎಸ್ಎಂಎಸ್ ಸಂದೇಶದ ಮೂಲಕ ತೆರಿಗೆದಾರರಿಗೆ ಒದಗಿಸುವ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಕೊಡಬೇಕೆಂದು ತೀರ್ಮಾನಿಸಲಾಯಿತು.

ಮಾಸಿಕ ತೆರಿಗೆ ದಾಖಲೆಗಳನ್ನು ಸರಳೀಕರಣ ಮಾಡಬೇಕೆಂದು ಹಾಗೂ ಇದರ ಬಗ್ಗೆ ವಿವರವಾದ ಯೋಜನೆಯನ್ನು ಮಾಡುವ ಬಗ್ಗೆ ಜಿಎಸ್​​ಟಿ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.

ಸಹಾಯವಾಣಿ ಮತ್ತು ಚಾಟ್ ಬಾಕ್ಸ್​ಗಳ ಮೂಲಕ ತೆರಿಗೆದಾರರ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ ಆದ್ಯತೆ ನೀಡಲು ತಿಳಿಸಲಾಯಿತು.

ತೆರಿಗೆ ವಂಚನೆ ಪ್ರಕರಣಗಳನ್ನು ಕೂಡಲೇ ಗುರುತಿಸಿ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಫ್ಟ್ ವೇರ್ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವರ್ಷದ ಏಪ್ರಿಲ್​ನಿಂದ ಜುಲೈ ವರೆಗೂ 13,763 ಕೋಟಿ ಜಿಎಸ್​ಟಿ ಪರಿಹಾರ ರಾಜ್ಯಕ್ಕೆ ಬರಬೇಕಾಗಿದ್ದು, ಅದನ್ನು ಪಡೆದುಕೊಳ್ಳಲು ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು.

Last Updated : Aug 7, 2020, 11:29 PM IST

ABOUT THE AUTHOR

...view details