ಬೆಂಗಳೂರು:ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಸಮಿತಿ ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಸಮಾಜದಲ್ಲಿ ಕಿಡಿಗೇಡಿಗಳ ಒಡೆದು ಆಳುವ ನೀತಿಗೆ ಕಿವಿಗೊಡದೆ, ಸೌಹಾರ್ದತೆ ಮೆರೆಯಲು ಮುಂದಾಗಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಟ್ವೀಟ್ ಮಾಡಿದ್ದಾರೆ. ಹಿಂದೂಪರ ಸಂಘಟನೆಗಳಿಂದ ಎಷ್ಟೇ ವಿರೋಧ ವ್ಯಕ್ತವಾದರೂ ಕರಗ ಉತ್ಸವ ಸಮಿತಿ ಹಿಂದಿನ ರೀತಿನೀತಿಗಳನ್ನು ಪಾಲಿಸುವುದಾಗಿ ತಿಳಿಸಿ, ಈ ನೆಲದ ಸೌಹಾರ್ದತೆಯನ್ನು ಎತ್ತಿಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
'ಮುಸ್ಲಿಮರ ಸಹಭಾಗಿತ್ವದಿಂದಲೇ ಕರಗ ನಡೆಸುವ ತೀರ್ಮಾನ ಕೈಗೊಂಡಿದ್ದು ಸ್ವಾಗತಾರ್ಹ' - ಮುಸ್ಲಿಂರ ಸಹಭಾಗಿತ್ವದಿಂದಲೇ ಕರಗ ಉತ್ಸವ ನಡೆಸುವ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ: ಜಮೀರ್ ಖಾನ್
ಕರಗ ಉತ್ಸವ ಸಮಿತಿ ಹಿಂದಿನ ರೀತಿನೀತಿಗಳನ್ನು ಪಾಲಿಸುವುದಾಗಿ ತಿಳಿಸಿ, ಈ ನೆಲದ ಸೌಹಾರ್ದತೆಯನ್ನು ಎತ್ತಿಹಿಡಿದಿದೆ ಎಂದು ಜಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.
ಜಮೀರ್ ಖಾನ್
ಬೆಂಗಳೂರು ಕರಗದ ಸಂದರ್ಭದಲ್ಲಿ ತಾಯಿಯನ್ನು ದರ್ಗಾಕ್ಕೆ ಕರೆದುಕೊಂಂಡು ಹೋಗುವುದು ವಾಡಿಕೆ. ಆದರೆ, ಉತ್ಸವದ ವೇಳೆ ಕರಗವು ದರ್ಗಾಗೆ ಪ್ರವೇಶ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಹೇಳಿದ್ದವು. ಆದರೆ ಉತ್ಸವ ಸಮಿತಿ ಮುಸ್ಲಿಮರ ಸಹಭಾಗಿತ್ವದಿಂದಲೇ ಕರಗ ಉತ್ಸವ ನಡೆಸುವ ತೀರ್ಮಾನ ಕೈಗೊಂಡಿದೆ. ಸಮಿತಿಯ ನಿಲುವಿಗೆ ನನ್ನ ಅಭಿನಂದನೆಗಳು ಎಂದು ಜಮೀರ್ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ: ರೇಸ್‌ನಲ್ಲಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ