ಬೆಂಗಳೂರು:ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ಅನುಗುಣವಾಗಿ ಭತ್ತ, ಜೋಳ ಮತ್ತು ರಾಗಿ ಖರೀದಿಗಾಗಿ ಸಚಿವ ಸಂಪುಟ ಉಪ ಸಮಿತಿಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ, ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಖರೀದಿ ಕೇಂದ್ರ ಗುರುತಿಸಿ, ಜನವರಿ ತಿಂಗಳಿಂದ ಖರೀದಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಬಲ ಬೆಲೆಯಡಿ ಭತ್ತ, ಜೋಳ, ರಾಗಿ ಖರೀದಿಗೆ ತೀರ್ಮಾನ ಕೇಂದ್ರ ಸರ್ಕಾರ, ಸಾಮಾನ್ಯಭತ್ತಕ್ಕೆ ₹ 1,815, ಭತ್ತ ಗ್ರೇಡ್ ಎ ₹ 1,835, ಬಿಳಿ ಜೋಳ ₹ 2,550, ಬಿಳಿ ಜೋಳ ಮಾಲ್ದಂಡಿ ₹2,570, ರಾಗಿ ₹ 3,150. ನಂತೆ ಬೆಂಬಲ ಬೆಲೆ ನಿಗದಿ ಮಾಡಿದೆ ಎಂದು ವಿವರಿಸಿದರು.
ಈ ವರ್ಷ 1.80 ಲಕ್ಷ ಮೆಟ್ರಿಕ್ ಟನ್ ಭತ್ತ, 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗಾಗಿ ತೀರ್ಮಾನ ಮಾಡಿಲಾಗಿದೆ. ಮಾರ್ಚ್ 31 ವರೆಗೆ ಬೆಂಬಲ ಬೆಲೆಯಡಿ ಖರೀದಿ ಮಾಡುತ್ತೇವೆ. ತೊಗರಿ ಬೇಳೆ ಸಂಬಂಧ ಮುಂದಿನ ದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.