ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಜಲ ತಾಂಡವಕ್ಕೆ ಬಲಿಯಾದವರ ಸಂಖ್ಯೆ ಮತ್ತಷ್ಟು ಏರಿಕೆ - ಪ್ರಾಣ ಕಳೆದುಕೊಂಡವರ ಸಂಖ್ಯೆ 76 ಕ್ಕೆ ಏರಿಕೆ

ರಾಜ್ಯದಲ್ಲಿ ಮಹಾಮಳೆಗೆ ಅನಾಹುತಗಳ ಸರಮಾಲೆಯೇ ಕಂಡುಬಂದಿತ್ತು. ಅದರಂತೆಯೇ ಇಲ್ಲಿಯವರೆಗೆ 66 ಮಂದಿ ಸಾವನ್ನಪ್ಪಿದ್ದರು ಎಂಬ ಸುದ್ದಿಯೇ ರಾಜ್ಯದ ಜನತೆಯಲ್ಲಿ ಆತಂಕವನ್ನುಂಟು ಮಾಡಿತ್ತು. ಆದರೀಗ ಸಾವಿನ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ. ಸುಮಾರು 10 ಮಂದಿ ಪ್ರವಾಹದಿಂದ ನಾಪತ್ತೆಯಾಗಿದ್ದಾರೆ.

ವರುಣಾಘಾತಕ್ಕೆ ಸಾವಿಗೀಡಾದವರ ಸಂಖ್ಯೆ 76ಕ್ಕೆ ಏರಿಕೆ: 10 ಮಂದಿ ನಾಪತ್ತೆ

By

Published : Aug 18, 2019, 11:43 PM IST

ಬೆಂಗಳೂರು: ರಾಜ್ಯದಲ್ಲಿ ಎದುರಾದ ಭೀಕರ ಪ್ರವಾಹದಿಂದ ಈವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ.

ಶನಿವಾರ 66 ಇದ್ದ ಸಾವಿನ ಸಂಖ್ಯೆ ಭಾನುವಾರ 76 ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 10 ಮಂದಿ ಪ್ರವಾಹದಿಂದ ನಾಪತ್ತೆಯಾಗಿದ್ದಾರೆ. ಭಾನುವಾರ ಕೃಷ್ಣಾ ಮೇಲ್ದಂಡೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಇದರ ಪರಿಣಾಮ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ 1.6 ಲಕ್ಷ ಕ್ಯೂಸೆಕ್​ ನೀರಿನ ಹರಿವು ಕಂಡುಬಂದಿದೆ. ಬೆಳಗಾವಿಯಲ್ಲಿ 16 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ 11, ಶಿವಮೊಗ್ಗದಲ್ಲಿ 10 ಮಂದಿ ಹಾಗೂ ಚಿಕ್ಕಮಗಳೂರಿನಲ್ಲಿ 10, ಮೈಸೂರಿನಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವರುಣಾಘಾತಕ್ಕೆ ಸಾವಿಗೀಡಾದವರ ಸಂಖ್ಯೆ 76ಕ್ಕೆ ಏರಿಕೆ: 10 ಮಂದಿ ನಾಪತ್ತೆ

ಉಳಿದಂತೆ ಉತ್ತರ ಕನ್ನಡ, ಹಾಸನ, ಉಡುಪಿ, ಧಾರವಾಡದಲ್ಲಿ ತಲಾ 4 ಮಂದಿ ಹಾಗೂ ಬಾಗಲಕೋಟೆಯಲ್ಲಿ 3 ಮಂದಿ ಸಾವಿಗೀಡಾಗಿದ್ದಾರೆ. ಗದಗ, ಯಾದಗಿರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಡಗಿನಲ್ಲಿ 5, ಹಾವೇರಿಯಲ್ಲಿ ಒಬ್ಬರು, ಬೆಳಗಾವಿಯಲ್ಲಿ ನಾಲ್ಕು ಮಂದಿ ಎಂದು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿಮುಖವಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರಬಿಡುವ ನೀರಿನ ಪ್ರಮಾಣವನ್ನೂ ಕಡಿಮೆಗೊಳಿಸಲಾಗಿದೆ.

ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ:

ಒಟ್ಟು ಸಂಭವಿಸಿದ ಸಾವು -76

ನಾಪತ್ತೆಯಾದವರ ಸಂಖ್ಯೆ -10

ಜಾನುವಾರುಗಳ ಸಾವು -992

ಪ್ರವಾಹ ಪೀಡಿತ ಜಿಲ್ಲೆ -22

ಪ್ರವಾಹ ಪೀಡಿತ ತಾಲೂಕು- 103

ಒಟ್ಟು ಬೆಳೆ ಹಾನಿ 6.9ಲಕ್ಷ ಹೆಕ್ಟೇರ್

ಒಟ್ಟು ಮನೆಗಳ ಹಾನಿ- 75,317

ABOUT THE AUTHOR

...view details