ಬೆಂಗಳೂರು: ಲಾಕ್‌ಡೌನ್ ನಡುವೆ ಶಾಸಕರ ನಕಲಿ ಪಾಸ್ ಹಾಕಿಕೊಂಡು ಹೆಸರು, ನಂಬರ್ ಏನೂ ಇಲ್ಲದೆ ಕೇವಲ ಶಾಸಕರ ಪಾಸ್ ಪಡೆದು ಸುಖಾಸುಮ್ಮನೆ ಓಡಾಟ ನಡೆಸುತ್ತಿದ್ದ ಇನ್ನೋವಾ ಕಾರ್ ಅನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಸಕರ ನಕಲಿ ಪಾಸ್ ಬಳಸಿ ಓಡಾಟ: ಕಾರ್ ವಶಕ್ಕೆ ಪಡೆದ ಪೊಲೀಸರು - ಶಾಸಕರ ನಕಲಿ ಪಾಸ್ ಬಳಸಿ ಓಡಾಟ
ಶಾಸಕರ ನಕಲಿ ಪಾಸ್ ಹಾಕಿಕೊಂಡು ಓಡಾಡುತ್ತಿದ್ದ ಇನ್ನೋವಾ ಕಾರ್ ಮತ್ತು ಓರ್ವನನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ ವಶಕ್ಕೆ ಪಡೆದ ಪೊಲೀಸರು
ಪಾಸ್ ನಲ್ಲಿರುವ ಕಾರ್ ನಂಬರ್‌ಗೂ ಓಡಾಟ ನಡೆಸುತ್ತಿರುವ ಕಾರ್ ನಂಬರ್‌ಗೂ ವ್ಯತ್ಯಾಸ ಕಂಡುಬಂದಿರುವುದರಿಂದ, ಸದ್ಯ ಕಾರ್ ವಶಕ್ಕೆ ಪಡೆದು, ಚಾಲಕನನ್ನು ಪೊಲೀಸರು ವಿಚಾರಣೆ ನೆಡೆಸುತ್ತಿದ್ದಾರೆ.