ಕರ್ನಾಟಕ

karnataka

ETV Bharat / state

ಕೆಲ ಸಂಘಟನೆಗಳಿಂದ ಬೆದರಿಕೆ ಇರೋದು ನಿಜ.. ಗನ್​ ಇದ್ದದ್ದಕ್ಕೆ ಬಚಾವ್ ಆದೆ: ಶಶಿಕುಮಾರ್

ಕ್ಯಾಮ್ಸ್​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಸ್ವತಃ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಶಶಿಕುಮಾರ್
ಶಶಿಕುಮಾರ್

By

Published : Jul 30, 2021, 11:55 AM IST

ಬೆಂಗಳೂರು: ಕ್ಯಾಮ್ಸ್​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ. ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಬಿಇಎಲ್ ಲೇಔಟ್​ನ ತಮ್ಮ ಮನೆಯ ಬಳಿ ಕಾರು ಇಳಿಯುತ್ತಿದ್ದಂತೆ ನಾಲ್ವರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ ಎನ್ನಲಾಗಿದೆ.

ಕೆಲ ಸಂಘಟನೆಗಳಿಂದ ಬೆದರಿಕೆ ಇರೋದು ನಿಜ.. ಗನ್​ ಇದ್ದದ್ದಕ್ಕೆ ಬಚಾವ್ ಆದೆ: ಶಶಿಕುಮಾರ್

ಬೆದರಿಕೆ ಇರುವುದು ನಿಜ

ಈ ಕುರಿತು ಪ್ರತಿಕ್ರಿಯಿಸಿರುವ ಶಶಿಕುಮಾರ್​, ನನ್ನ ಮೇಲೆ ಯಾರು ದಾಳಿ ಮಾಡಲು ಬಂದಿದ್ದರು ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಆದರೆ, ಬೆದರಿಕೆ ಇದ್ದಿದ್ದು ನಿಜ, ಆರ್​ಟಿಐ, ಆರ್​ಟಿಇ, ಪೋಷಕರ ಸಂಘ, ಕೆಲ ಖಾಸಗಿ ಶಾಲಾ ಒಕ್ಕೂಟದ ಹೆಸರಿನಲ್ಲೂ ನನಗೆ ಬೆದರಿಕೆ ಇದೆ ಎಂದಿದ್ದಾರೆ.

ಗುರುವಾರ ರಾತ್ರಿ ಏಕಾಏಕಿ ನಾಲ್ವರು ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ. ಕತ್ತಲು ಇದ್ದಿದ್ದರಿಂದ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇಡೀ ಘಟನೆ 5-7 ಸೆಕೆಂಡ್​​ನಲ್ಲಿ ನಡೆದಿತ್ತು. ಗನ್ ಇದ್ದಿದ್ದರಿಂದ ಬಚಾವಾಗಿದ್ದೇನೆ. ಪೊಲೀಸರಿಗೆ ಸಂಪೂರ್ಣ ಮಾಹಿತಿ‌ ನೀಡಿದ್ದೇನೆ, ತನಿಖೆಗೆ ಸಹಕರಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಗಾಗಿ ತಲಾಶ್

ಈ ಬಗ್ಗೆ ಮಾತನಾಡಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ಶಶಿಕುಮಾರ್​​ ಮನೆ ಬಳಿಯೇ ಹಲ್ಲೆ ನಡೆದಿದೆ. ಈ ಬಗ್ಗೆ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆರ್​ಟಿಐ ಕಾರ್ಯಕರ್ತರೊಬ್ಬರ ಜತೆ ಹಳೆ ವೈಷಮ್ಯ ಹೊಂದಿದ್ದ ಶಶಿಕುಮಾರ್​ ಮೇಲೆ ಈ ಹಿಂದೆಯೂ ಹತ್ಯೆಗೆ ಯತ್ನ ನಡೆದಿತ್ತು ಅನ್ನೋದು ತಿಳಿದು ಬಂದಿದೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಇದನ್ನೂ ಓದಿ: ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details