ಬೆಂಗಳೂರು:ನಗರದಲ್ಲಿ ಹಾಡಹಗಲೇ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬಳಿ ಸಂಜೆ 4:30ರ ಸುಮಾರಿಗೆ ಡಿ.ಜೆ ಹಳ್ಳಿ ನಿವಾಸಿ ಇದಾಯತ್ ಖಾನ್ ಎಂಬ ರೌಡಿ ಶೀಟರ್ ಮೇಲೆ ಹಲ್ಲೆ ದಾಳಿಯಾಗಿದೆ.
ಬೆಂಗಳೂರಲ್ಲಿ ಹರಿದ ನೆತ್ತರು: ಪತ್ನಿ ಎದುರೇ ರಕ್ತದ ಮಡುವಿನಲ್ಲಿ ಬಿದ್ದ ರೌಡಿ ಶೀಟರ್! - ಬೆಂಗಳೂರು ರೌಡಿಶೀಟರ್ ಸುದ್ದಿ
ಲಾಕ್ಡೌನ್ ನಡುವೆ ಬೆಂಗಳೂರಿನಲ್ಲಿ ಹಾಡಹಗಲೇ ನೆತ್ತರು ಹರಿದಿದೆ. ರೌಡಿ ಶೀಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಂದಿನಿ ಲೇಔಟ್ ಬಳಿ ಇದಾಯತ್ ಖಾನ್ ಎಂಬ ರೌಡಿ ಶೀಟರ್ ಮೇಲೆ ಹಲ್ಲೆ ನಡೆದಿದೆ.
ಇದಾಯತ್ ಖಾನ್ ನಂದಿನಿ ಲೇಔಟ್ ಬಳಿ ತನ್ನ ಪತ್ನಿಯ ಮನೆಗೆ ರಂಜಾನ್ ಪ್ರಯುಕ್ತ ಬಂದಿದ್ದ. ಈ ವಿಚಾರ ತಿಳಿದ ಮೂರ್ನಾಲ್ಕು ಜನ ದುಷ್ಕರ್ಮಿಗಳು ಪತ್ನಿಯ ಎದುರೇ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯುವ ಪ್ರಯತ್ನ ಮಾಡಿದರೂ ಕೂಡ ಆರೋಪಿಗಳು, ಮನೆಯಲ್ಲಿರುವ ವಸ್ತುಗಳ ಮೇಲೆ, ಬಾಗಿಲುಗಳ ಮೇಲೆ ಮಾರಾಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಹಿದಾಯತ್ ಖಾನ್ ಎದುರಾಳಿಗಳ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ. ಜೈಲಿನಿಂದ ಹೊರ ಬರುವುದನ್ನು ಕಾದು ಕುಳಿತ ದುಷ್ಕರ್ಮಿಗಳು, ಹಳೆಯ ದ್ವೇಷದ ಹಿನ್ನೆಲೆ ಹಲ್ಲೆ ನಡೆಸಿದ್ದಾರೆಂಬ ಶಂಕೆಯಿದೆ. ಗಾಯಾಳು ಇದಾಯತ್ ಖಾನ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಮೇಲೆ ನಗರದ ಕೆಲ ಠಾಣೆಗಳಲ್ಲಿ ರೌಡಿ ಪಟ್ಟಿ ಇದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.