ಕರ್ನಾಟಕ

karnataka

ETV Bharat / state

ಪೊಲೀಸ್ ಪೇದೆಯಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ.. ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಹಲಸೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ

ಪೊಲೀಸ್​ ಪೇದೆಯಾಗಿರುವ ಅಣ್ಣಪ್ಪ ವಿನೋದ್​​ ಎಂಬ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Deadly assault on a man by a police constable
ಪೊಲೀಸ್ ಪೇದೆಯಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

By

Published : Jan 12, 2020, 1:19 PM IST

ಬೆಂಗಳೂರು:ಪೊಲೀಸ್ ಪೇದೆಯೊಬ್ಬರು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ವಿನೋದ್ ಕುಮಾರ್ ಹಾಗೂ ಆತನ ಪತ್ನಿ ದಿವ್ಯಾ ಇಬ್ಬರ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಇಬ್ಬರ ನಡುವೆ ಜಗಳ‌ ಅತಿರೇಕಕ್ಕೇರಿದ ಪರಿಣಾಮ, ವಿನೋದ್ ಹಲಸೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸ್ ಪೇದೆಯಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಹಲಸೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಪ್ಪ ದಿವ್ಯಗೆ ಸಂಬಂಧಿಕರಾಗಿದ್ದರು. ದಿವ್ಯ ಮನೆಯವರು ವಿನೋದ್​ಗೆ ಕಿರಿ ಕಿರಿ ಮಾಡುತ್ತಿದ್ದರು. ಅಣ್ಣಪ್ಪ ಕೇಸ್​​​​ನನ್ನು ವೈಯಕ್ತಿಕವಾಗಿ ತೆಗೆದುಕೊಂಡು ವಿನೋದ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ ಅಣ್ಣಪ್ಪ ಜೊತೆ ದಿವ್ಯ ಕೂಡ ಹಲ್ಲೆ ನಡೆಸಿದ್ದಾಳೆ. ಸದ್ಯ ಪೇದೆ ಹಾಗೂ ಪತ್ನಿ ದಿವ್ಯ ಕುಟುಂಬಸ್ಥರು ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯಿಂದ ‌ವಿನೋದ್ ಮುಖ ಕೈಗಾಯವಾಗಿದೆ. ಈ ಘಟನೆ ಬಗ್ಗೆ ವಿನೋದ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ‌. ಪ್ರಕರಣದ ಗಂಭೀರತೆ ಅರಿತ ಬಾಣಸ್ವಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details