ಬೆಂಗಳೂರು: ವಿಸ್ಕ್ ಡಿಸ್ಟ್ರಿಬ್ಯೂಟರ್ಗೆ ದುಡ್ಡಿನ ವಿಚಾರವಾಗಿ ಹಲ್ಲೆ ನಡೆಸಿ ಕಿಡ್ನಾಪ್ಗೆ ಯತ್ನಿಸಿರುವ ಘಟನೆ ನಗರದ ನಾಗರಭಾವಿ ಎರಡನೇ ಹಂತದಲ್ಲಿ ನಡೆದಿದೆ.
ನಿನ್ನೆ ಸಂಜೆ ನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ವಿಸ್ಕಿ ಡಿಸ್ಟ್ರಿಬ್ಯೂಟರ್ ಅವಿನಾಶ್ ಎಂಬುವವರ ಮೇಲೆ ಹಲ್ಲೆ ಮಾಡಿ ಅಪಹರಿಸಲು ಯತ್ನಿಸಲಾಗಿತ್ತು ಎಂದು ದೂರು ದಾಖಲಾಗಿದೆ.
ಅವಿನಾಶ್ರಿಂದ ಪ್ರವೀಣ್ ಶೆಟ್ಟಿ ಎಂಬುವವರು 35 ಲಕ್ಷ ರೂ. ಮೌಲ್ಯದ ಮದ್ಯ ಪಡೆದಿದ್ದರು. ಕೋವಿಡ್ ಬಂದ ಹಿನ್ನೆಲೆ ವಿಸ್ಕಿತಯನ್ನು ವಿತರಣೆ ಮಾಡಲಾಗಲಿಲ್ಲ ಎಂದು ಅವಿನಾಶ್ರಿಗೆ ಪ್ರವೀಣ್ ಶೆಟ್ಟಿಯು ಹಣ ನೀಡಿರಲಿಲ್ಲ. ಈ ಹಿನ್ನೆಲೆ, ಪ್ರವೀಣ್ ಶೆಟ್ಟಿ ವಿರುದ್ಧ ಕೊರ್ಟ್ನಲ್ಲಿ ಅವಿನಾಶ್ ಖಾಸಗಿ ದೂರು ದಾಖಲಿಸಿದ್ದರು. ಹಣದ ವಿಚಾರವಾಗಿ ಕರೆ ಮಾಡಿ ನಾಗರಭಾವಿ ಬಳಿ ಕರೆಸಿದ್ದ ಪ್ರವೀಣ್ ಶೆಟ್ಟಿ ಆಪ್ತ ಜೀವನ್ ಎಂಬಾತ, ಹಣ ಕೊಡದೆ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.