ಆನೇಕಲ್: ಇಲ್ಲಿನ ಹೆನ್ನಾಗರ ಕೆರೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು, ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆನ್ನಾಗರ ಕೆರೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆ - ಹೆನ್ನಾಗರ ಕೆರೆ
ಬೆಂಗಳೂರಿನ ಆನೇಕಲ್ನ ಹೆನ್ನಾಗರ ಕೆರೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೆನ್ನಾಗರ ಕೆರೆಯಲ್ಲಿ ಯುವಕನ ಶವ ಪತ್ತೆ
ಕೆರೆ ದಂಡೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳು ನೀರಿನ ಮೇಲೆ ಶವ ತೇಲಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೆನ್ನಾಗರ ಕೆರೆಯಲ್ಲಿ ತೇಲುತ್ತಿರುವ ಯುವಕನ ಶವ
ಅಂದಾಜು 22 ವರ್ಷದ ಯುವಕನ ಶವ ಇದಾಗಿದ್ದು, ಮೀನು ಹಿಡಿಯಲು ಬಂದಾಗ ಆಯತಪ್ಪಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.