ಕರ್ನಾಟಕ

karnataka

ETV Bharat / state

ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ.. 'ದೃಶ್ಯ' ಸಿನೆಮಾ ನೆನಪಿಸುವಂತಿದೆ ಕೃತ್ಯ! - Dead Body Found in kamakshipalya police station

ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಮುಂಭಾಗದ ಮೋರಿಯಲ್ಲಿ ಅಪರಿಚಿತರ ಶವವೊಂದು ಪತ್ತೆಯಾಗಿದೆ.

dead-body-found-in-kamakshipalya-police-station
ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ..!

By

Published : Feb 15, 2021, 5:38 PM IST

Updated : Feb 15, 2021, 6:16 PM IST

ಬೆಂಗಳೂರು:ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಮುಂಭಾಗದ ಹೆಚ್​.ಬಿ.ಕಲ್ಯಾಣ ಮಂಟಪದ ಬಳಿಯ ಚರಂಡಿ ದುರಸ್ತಿ ವೇಳೆ ಬಿಬಿಎಂಪಿ ಸಿಬ್ಬಂದಿಗೆ ಶವವೊಂದು ಪತ್ತೆಯಾಗಿದ್ದು, ವಿಜಯನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.

ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ

ಚರಂಡಿಯಲ್ಲಿ ಹಲವು ದಿನಗಳಿಂದ ಸರಾಗವಾಗಿ ನೀರು ಹೋಗುತ್ತಿರಲಿಲ್ಲ. ಇದರಿಂದ‌ ಸುತ್ತಮುತ್ತಲಿನ ಪ್ರದೇಶ ವಾಸನೆಯಿಂದ ಕೂಡಿತ್ತು. ಈ ಸಂಬಂಧ ಬಿಬಿಎಂಪಿ ಸಿಬ್ಬಂದಿ ಚರಂಡಿಯಲ್ಲಿ ಹೂಳು ತೆಗೆಯಲು ಮೋರಿಯ ಛಾವಣಿ ತೆಗೆಯಲು ಮುಂದಾಗುತ್ತಿದ್ದಂತೆ ಶವದ ಕಳೇಬರ ಕಂಡು ಆತಂಕಕ್ಕೆ ಒಳಗಾಗಿದ್ದಾರೆ.

2 ವರ್ಷಕ್ಕೂ ಹಿಂದೆಯೇ ಮಹಿಳೆ ಶವವನ್ನು ಚರಂಡಿಯಲ್ಲಿ ಹಾಕಿರಬಹುದು ಎಂದು‌ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಸದ್ಯ ಶವವನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ‌‌.

ಓದಿ:ಚಿಕ್ಕಬಳ್ಳಾಪುರ: ಕೆರೆಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ

ಮೃತಪಟ್ಟಿರುವವರ ಹೆಸರು, ವಿಳಾಸ ಗೊತ್ತಾಗಿಲ್ಲ. ಈ ಹಿಂದೆ‌ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಮಾಹಿತಿ ಕಲೆ ಹಾಕಿರುವ ಪೊಲೀಸರು ಅನಾಥ ಶವದ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Last Updated : Feb 15, 2021, 6:16 PM IST

ABOUT THE AUTHOR

...view details