ಆನೇಕಲ್:ಪತ್ನಿಯನ್ನು ಕಳೆದುಕೊಂಡು ಮಗನಿಂದಲೂ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿದ್ದ ವ್ಯಕ್ತಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಾರಾಯಣಪುರದಲ್ಲಿ ನಡೆದಿದೆ.
ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆ , ಕೊಲೆ ಶಂಕೆ - ವ್ಯಕ್ತಿಯ ಶವ ಪತ್ತೆ
ಪತ್ನಿಯನ್ನು ಕಳೆದುಕೊಂಡು ಮಗನಿಂದಲ್ಲೂ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿದ್ದ ವ್ಯಕ್ತಿ ಅನುಮಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ನಾರಾಯಣಪುರದಲ್ಲಿ ನಡೆದಿದೆ.
ಚೌಡಪ್ಪ (50) ಮೃತ ವ್ಯಕ್ತಿ. ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು,ಕೊಲೆ ಶಂಕೆ ವ್ಯಕ್ತವಾಗಿದೆ. ಈತ ಕಳೆದ 15 ವರ್ಷಗಳಿಂದ ನಾರಾಯಣಪುರದಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಒಂದು ವರ್ಷದ ಹಿಂದೆ ಚೌಡಪ್ಪನ ಪತ್ನಿ ಆತ್ಮಹತ್ಯೆಗೆ ಶರಣಾಗಿ ಇದ್ದೊಬ್ಬ ಮಗನು ಸಹ ಬೇರೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಇನ್ನೂ ಶಾಲಾ ಮಕ್ಕಳು ಆಟವಾಡುತ್ತಾ ಮನೆಯ ಕಿಟಕಿ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.