ನೆಲಮಂಗಲ(ಬೆಂಗಳೂರು):ಜ್ಯುವೆಲರಿ ಶಾಪ್ ಮಾಲೀಕನ ಮನೆಯ ಸಂಪ್ನಲ್ಲಿ ಕೆಲಸದಾಕೆಯ ಶವ ಪತ್ತೆಯಾಗಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.
ಜ್ಯೂವೆಲರಿ ಶಾಪ್ ಮಾಲೀಕನ ಮನೆಯ ಸಂಪ್ನಲ್ಲಿ ಕೆಲಸದಾಕೆಯ ಶವ ಪತ್ತೆ! - Ground floor Latest Crime News
ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿರುವ ಮಮತ ಜ್ಯುವೆಲರಿ ಶಾಪ್ ಮಾಲೀಕ ನವರತನ್ ಜೈನ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಶವವಾಗಿ ಮಾಲೀಕನ ಮನೆಯ ಸಂಪ್ನಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಜ್ಯೂವೆಲರಿ ಶಾಪ್ ಮಾಲೀಕನ ಮನೆಯ ಸಂಪ್ ನಲ್ಲಿ ಕೆಲಸದಾಕೆಯ ಶವ ಪತ್ತೆ
ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಲ್ಲಸಂದ್ರದ ನಿವಾಸಿ ಸಾಕಮ್ಮ(55) ಮೃತ ಮಹಿಳೆ. ಈ ಮಹಿಳೆ ಕಳೆದ 15 ವರ್ಷಗಳಿಂದ ಮಮತ ಜ್ಯುವೆಲರಿ ಶಾಪ್ ಮಾಲೀಕ ನವರತನ್ ಜೈನ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇಂದು ಬೆಳಗ್ಗೆ ನಿಗೂಢವಾಗಿ ಮನೆಯ ಸಂಪ್ನಲ್ಲಿ ಆಕೆಯ ಶವ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.