ಕರ್ನಾಟಕ

karnataka

ETV Bharat / state

ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್​​ರಿಂದ ಸನ್ಮಾನ - ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧನೆಗೈದ ಹಾಗೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೋಲೀಸರಿಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಸನ್ಮಾನ ಮಾಡಿ ಶುಭ ಹಾರೈಸಿದ್ದಾರೆ.

ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್​​ರಿಂದ ಸನ್ಮಾನ

By

Published : Aug 15, 2019, 5:45 PM IST

ಬೆಂಗಳೂರು:73ನೇ ಸ್ವಾತಂತ್ರ್ಯ ದಿನಾಚರಣೆಯಾದ ಇಂದು ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದವರಿಗೆ ಒಂದೆಡೆ ಪದಕ ಪ್ರಧಾನ ಮಾಡಿದರೆ, ಮತ್ತೊಂದೆಡೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ ಮಾಡಿ ಭೇಷ್ ಎಂದಿದ್ದಾರೆ.

ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್​​ರಿಂದ ಸನ್ಮಾನ

ಇಂದು ಯಶವಂತಪುರ ವ್ಯಾಪ್ತಿಯ ಬಳಿ ಇರುವ ಉತ್ತರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಡಿಸಿಪಿ, ಶಶಿಕುಮಾರ್, ಎಸಿಪಿ ,ಸಿಬ್ಬಂದಿಗಳು ಸೇರಿದಂತೆ ವಿನೂತನವಾಗಿ ಆಚರಣೆ ಮಾಡಲಾಯಿತು. ಈ ವೇಳೆ ಉತ್ತರ ವಿಭಾಗದ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಜುಲೈ2019ರಲ್ಲಿ‌ ಉತ್ತಮ‌ ಕರ್ತವ್ಯ ನಿರ್ವಹಿಸುರುವ
ಲೋಹಿತ್, ಪಿಎಸ್​ಐ ನಂದಿನೀಲೇಔಟ್ ಪೊಲೀಸ್ ಠಾಣೆ, ರೂಪ ಕೆ ಎಸ್, ಸಬ್ ಇನ್ಸ್​​ಪೆಕ್ಟರ್​ ಸಂಜಯನಗರ, ‌ಮಂಜುಕುಮಾರ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆ, ಮಂಜಣ್ಣ ಹೆಚ್ ಸಿ ಸಂಜಯನಗರ ಪೊಲೀಸ್ ಠಾಣೆ, ಯಲ್ಲಮ್ಮ ಸೋಲದೇವನಹಳ್ಳಿ ಪೊಲಿಸ್ ಠಾಣೆ, ರಾಜಶೇಖರಯ್ಯ ಹೆಬ್ಬಾಳ ಪೊಲೀಸ್ ಠಾಣೆ ಇಷ್ಟು ಮಂದಿಗೆ ಡಿಸಿಪಿ ಶಶಿಕುಮಾರ್ ಸನ್ಮಾನಿಸಿದರು.

ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್​​ ವೈರಲ್ ಆಗ್ತಿದೆ.

ABOUT THE AUTHOR

...view details