ಬೆಂಗಳೂರು: ನಿಮಗೆ ಏನೇ ಅಗತ್ಯ ಸೇವೆ ಬೇಕಾದರೂ ನಿಮ್ಮ ಮನೆಬಾಗಿಲಿಗೆ ತಂದುಕೊಡುವ ವ್ಯವಸ್ಥೆ ನಾವು ಮಾಡುತ್ತೇವೆ. ದಯಮಾಡಿ ಮನೆಯಿಂದ ಹೊರಬರಬೇಡಿ. ಕೊರೊನಾದಿಂದ ನಿಮ್ಮನ್ನು ನೀವೂ ಕಾಪಾಡಿಕೊಳ್ಳಿ ಎಂದು ಮೈಕ್ ಹಿಡಿದು ಬೀದಿ ಬೀದಿ ಸುತ್ತಿ ನಾಗರಿಕರಲ್ಲಿ ನಗರ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ಜಾಗೃತಿ ಮೂಡಿಸಿದ್ದಾರೆ
ಮೈಕ್ ಹಿಡಿದು ಬೀದಿ ಸುತ್ತಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ ಡಿಸಿಪಿ ರೋಹಿಣಿ ಕಟೋಚ್ ಸಪೆಟ್
ತಮ್ಮ ಕಾರ್ಯ ಪ್ರವೃತ್ತಿಯಿಂದಲೇ ಹುಬ್ಬೇರಿಸುವಂತೆ ಮಾಡಿರುವ ಡಿಸಿಪಿ ರೋಹಿಣಿಯವರು ಯಾವುದೇ ಕೀಳರಿಮೆಯಿಲ್ಲದೆ ಕಿರಿಯ ಪೊಲೀಸ್ ಸಿಬ್ಬಂದಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಸ್ವತಃ ಬೀದಿಗಿಳಿದು ಬೀದಿ ಬೀದಿ ಸುತ್ತಿ ಕೊರೊನಾದಿಂದಾಗುತ್ತಿರುವ ವಿಶ್ವವ್ಯಾಪಿ ಹಾನಿಯನ್ನು ಮನಗಾಣಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮನೆಯಿಂದ ಹೊರಬೇಡಿ ದಿನದಿಂದ ದಿನಕ್ಕೆ ಕೊರೊನಾ ಮಾರಿ ಹೆಚ್ಚಳವಾಗುತ್ತಿದೆ. ಈ ಹಂತದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮಗೆ ಏನಾದರೂ ಅಗತ್ಯ ಸೇವೆ ಬೇಕಾದರೆ ನಾವೇ ನಿಮಗೆ ತಂದು ಕೊಡುತ್ತೇವೆ. ಇದಕ್ಕಾಗಿಯೇ ಅನ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹಣ್ಣು, ತರಕಾರಿಗಳ ತಳ್ಳುವ ಗಾಡಿಯೇ ನಿಮ್ಮ ಮನೆಗೆ ಬರಲಿದೆ ಎಂದು ಅವರು ತಿಳಿಸಿದರು.