ಬೆಂಗಳೂರು:ನಗರದಲ್ಲಿ ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ಕಮಿಷನರ್ ಕಚೇರಿಯಲ್ಲಿ ರಾತ್ರಿಯಿಡಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಕೌನ್ಸೆಲಿಂಗ್ ನಡೆಸಲಾಗಿದೆ. ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ನೇತೃತ್ವದಲ್ಲಿ ಕೌನ್ಸೆಲಿಂಗ್ ನಡೆಸಲಾಗಿದ್ದು, ನಗರದ ಒಂದು ವಿಭಾಗದಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದ ಸಿಬ್ಬಂದಿಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವ ಹಿನ್ನೆಲೆ ನಿನ್ನೆ ಕೌನ್ಸೆಲಿಂಗ್ ಕರೆಯಲಾಗಿತ್ತು.
ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ರಾತ್ರಿಯಿಡಿ ಸಿಬ್ಬಂದಿಗಳೊಂದಿಗೆ ನಿಶಾ ಜೇಮ್ಸ್ ಕೌನ್ಸೆಲಿಂಗ್ - dcp nisha james counceling in bangalore
15ವರ್ಷಗಳ ಕಾಲ ಒಂದೇ ವಿಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ಕಮಿಷನರ್ ಕಚೇರಿಯಿಂದ ರಾತ್ರಿಯಿಡಿ ಸಿಬ್ಬಂದಿಗಳೊಂದಿಗೆ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಕೌನ್ಸೆಲಿಂಗ್ ನಡೆಸಿದ್ದಾರೆ.

ನಿಶಾ ಜೇಮ್ಸ್ ಕೌನ್ಸಿಲಿಂಗ್
ಸುಮಾರು 500 ಸಿಬ್ಬಂದಿಗಳೊಂದಿಗೆ ರಾತ್ರಿಯಿಡಿ ಕೌನ್ಸೆಲಿಂಗ್ ನಡೆಸಿ, ಡಿಸಿಪಿ ನಿಶಾ ಜೇಮ್ಸ್ ವರ್ಗಾವಣೆ ಆದೇಶ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಡಳಿತ ವಿಭಾಗ ವರ್ಗಾವಣೆ ನೋಟಿಫಿಕೇಶನ್ ಹೊರಡಿಸಿತ್ತು. ಈ ಹಿನ್ನೆಲೆ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಕೌನ್ಸೆಲಿಂಗ್ ನಡೆಸಲಾಯಿತು. ಇನ್ನು ಬೆಳಗ್ಗೆ ಕೌನ್ಸೆಲಿಂಗ್ ಬಂದ ನೂರಾರು ಸಿಬ್ಬಂದಿಗಳು ತಡರಾತ್ರಿವರೆಗೆ ಕೌನ್ಸೆಲಿಂಗ್ ಗಾಗಿ ಕಾದು ಕೂರಬೇಕಾಯಿತು.
ಇದನ್ನೂ ಓದಿ:ಪುಟ್ಟ ಪ್ರತಿಭೆ ಜ್ಞಾನ ಗುರುರಾಜ್ ಸೇರಿ 11 ಪ್ರಮುಖರಿಗೆ ಸಾಲುಮರ ತಿಮ್ಮಕ್ಕ ಪ್ರಶಸ್ತಿ
TAGGED:
nisha james counceling