ಬೆಂಗಳೂರು:ಆರೋಪಿಗಳಿಂದ ಹಣ ವಸೂಲಿ ಮಾಡಿದ ಆರೋಪದಡಿ ಮೈಕೊ ಲೇಔಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಆದೇಶ ಹೊರಡಿಸಿದ್ದಾರೆ.
ಹಣ ವಸೂಲಿ ಆರೋಪ: ಇಬ್ಬರು ಕಾನ್ಸ್ಟೆಬಲ್ಗಳ ಅಮಾನತ್ತು ಮಾಡಿ ಡಿಸಿಪಿ ಇಶಾಪಂತ್ ಆದೇಶ - ಮೈಕೊ ಲೇಔಟ್ ಪೊಲೀಸ್ ಠಾಣೆ
ಆರೋಪಿಗಳಿಂದ ಹಣ ವಸೂಲಿ ಮಾಡಿದ ಆರೋಪದಡಿ ಮೈಕೊ ಲೇಔಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿ ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಆದೇಶ ಹೊರಡಿಸಿದ್ದಾರೆ.
ಮೈಕೋ ಲೇಔಟ್ ಠಾಣೆಯ ಪಿಎಸ್ಐ ದಾದಾ ಆಯಾಥ್ ಹಾಗೂ ಪೇದೆ ರಾಮಚಂದ್ರಪ್ಪ ಅಮಾನತುಗೊಂಡವರು. ಇವರ ವಿರುದ್ಧ ಕಳೆದ ತಿಂಗಳು 26ರಂದು ಬೆಂಗಳೂರಿನ ಲಾಡ್ಜ್‌ನಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಕರೆತಂದು ಐದು ಸಾವಿರ ಹಣ ಪೀಕಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಆರೋಪಿಗಳು ಮೈಕೊ ಲೇಔಟ್ ಠಾಣೆಯ ಎಸಿಪಿಗೆ ದೂರು ನೀಡಿದ್ದರು. ಈ ಅಕ್ರಮದ ಕುರಿತು ತನಿಖೆ ನಡೆಸುವಂತೆ ಕೋರಿ ಇನ್ಸ್ಪೆಕ್ಟರ್ರಲ್ಲಿ ಆಗ್ರಹಿಸಿದ್ದರು.
ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್ಸ್ಟೇಬಲ್ಗಳನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.