ಕರ್ನಾಟಕ

karnataka

ETV Bharat / state

ಶ್ರೀಮಂತ್​ ಪಾಟೀಲ್​ ಭೇಟಿಗಾಗಿ ಮುಂಬೈಗೆ ಬಂದ ಡಿಸಿಪಿ: ಪೊಲೀಸರ ಅನುಮತಿಗೆ ತೆರಳಿದ ಶಶಿಕುಮಾರ್​ - Srimanth patil dcp

ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೈ ಶಾಸಕ ಶ್ರೀಮಂತ್ ‌ಪಾಟೀಲ್ ಹೇಳಿಕೆ ಪಡೆಯಲು ಡಿಸಿಪಿ ಶಶಿಕುಮಾರ್ ನೇತೃತ್ವದ ರಾಜ್ಯ ಪೊಲೀಸ್ ತಂಡ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.

ಮುಂಬೈ ಆಸ್ಪತ್ರೆಗೆ‌ ಡಿಸಿಪಿ ಆಗಮನ

By

Published : Jul 19, 2019, 12:41 PM IST

ಮುಂಬೈ/ ಬೆಂಗಳೂರು;ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೈ ಶಾಸಕ ಶ್ರೀಮಂತ್ ‌ಪಾಟೀಲ್ ಹೇಳಿಕೆ ಪಡೆಯಲು ಡಿಸಿಪಿ ಶಶಿಕುಮಾರ್ ನೇತೃತ್ವದ ರಾಜ್ಯ ಪೊಲೀಸ್ ತಂಡ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.

ಮುಂಬೈ ಆಸ್ಪತ್ರೆಗೆ‌ ಡಿಸಿಪಿ ಆಗಮನ

ನಿನ್ನೆ ಕಾಂಗ್ರೆಸ್ ನಾಯಕರು ಶ್ರೀಮಂತ್ ಪಾಟೀಲ್ ರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ವಿಧಾನಸೌಧ ಠಾಣೆಯಲ್ಲಿ ಶ್ರೀಮಂತ ಪಾಟೀಲ್ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ನಿನ್ನೆ ಸದನದಲ್ಲಿ ಸ್ಪೀಕರ್ ಗೃಹ ಸಚಿವ ಎಂ.ಬಿ.ಪಾಟೀಲ್ ಗೆ ಕಿಡ್ನಾಪ್ ಆರೋಪ ಸಂಬಂಧ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.

ಶಾಸಕನ ಹೇಳಿಕೆ ಪಡೆಯಲು ಡಿಸಿಪಿ ಶಶಿಕುಮಾರ್ ಮುಂಬೈ ಪೊಲೀಸರ ಅನುಮತಿ ಪಡೆಯಲು ತೆರಳಿದ್ದಾರೆ. ಅನುಮತಿ ಪಡೆಯಲು ಮುಂಬೈ ಪೊಲೀಸ್ ಆಯುಕ್ತರ ಭೇಟಿಗೆ ಶಶಿಕುಮಾರ್ ತೆರಳಿದ್ದಾರೆ. ಸದ್ಯ ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆಯಲ್ಲಿ ಎದೆ ನೋವಿನ ಕಾರಣ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.‌

For All Latest Updates

ABOUT THE AUTHOR

...view details