ಕರ್ನಾಟಕ

karnataka

ETV Bharat / state

ಎಸ್ಐಟಿ ಅಧಿಕಾರಿಗಳ ಮುಂದೆ ಅಜಯ್​​​ ಹಿಲೋರಿ ಹಾಜರಾಗುವ ಸಾಧ್ಯತೆ - ಡಿಸಿಪಿ ಅಜಯ್ ಹಿಲೋರಿ

ಐಎಂಎ ಮುಖ್ಯಸ್ಥ ಮನ್ಸೂರ್​ಗೆ ಈ ಹಿಂದೆ ಕ್ಲೀನ್ ಚಿಟ್ ನೀಡಿದ್ದ ಅಂದಿನ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಇಂದು ಎಸ್​ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಅಜಯ್ ಹಿಲೋರಿ

By

Published : Aug 2, 2019, 10:11 AM IST

Updated : Aug 2, 2019, 12:15 PM IST

ಬೆಂಗಳೂರು:ಐಎಂಎ ವಂಚನೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಇಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.‌

ಅಜಯ್ ಹಿಲೋರಿ ಸೇರಿ ಎಸಿಪಿ ರಮೇಶ್ ಹಾಗೂ ಇನ್ಸ್​ಪೆಕ್ಟರ್ ರಮೇಶ್​ಗೆ ಎಸ್​ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಬೆಳಗ್ಗೆ ‌11 ಗಂಟೆಗೆ ಎಸ್ಐಟಿ ಮುಂದೆ ಅಜಯ್​ ಹಿಲೋರಿ ಹಾಜರಾಗುವ ಸಾಧ್ಯತೆ ಇದೆ.

ಸದ್ಯ ನಗರ ಸಶಸ್ತ್ರ ಪಡೆಯ ಒಂದನೇ ಬೆಟಾಲಿಯನ್ ಕಮಾಂಡೆಂಟ್ ಆಗಿರುವ ಹಿಲೋರಿ ಅಂದು ಪೂರ್ವ ವಿಭಾಗ ಡಿಸಿಪಿಯಾಗಿದ್ದ ವೇಳೆ ಐಎಂಎ ಅಕ್ರಮ ಕುರಿತು ತನಿಖೆ ನಡೆಸಿ ಮನ್ಸೂರ್​ಗೆ ಕ್ಲೀನ್ ಚಿಟ್ ನೀಡಿದ್ದರು. ಹೀಗಾಗಿ ಕ್ಲೀನ್ ಚಿಟ್ ಹಾಗೂ ಮನ್ಸೂರ್​ನಿಂದ ಹಣ ಪಡೆದಿರುವ ಆರೋಪದ ಕುರಿತು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Last Updated : Aug 2, 2019, 12:15 PM IST

ABOUT THE AUTHOR

...view details