ಬೆಂಗಳೂರು:ರಾಜ್ಯ ರಾಜಕಾರಣ ದಿಕ್ಕೊಂದು ತಿರುವು ಪಡೆಯುತ್ತಲೇ ಇದೆ. ಇಂದು ವಿಧಾನಸಭೆ ಕಲಾಪ ನಡೆಯುತ್ತಿದ್ದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಹೆಗಲ ಮೇಲೆ ಸಚಿವ ಡಿಕೆ ಶಿವಕುಮಾರ್ ಕೈ ಹಾಕಿ ರಿಲ್ಯಾಕ್ಸ್ ಮೂಡ್ನಲ್ಲಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.
ಡಿಸಿಎಂ ಪರಮೇಶ್ವರ್ ಹೆಗಲ ಮೇಲೆ ಕೈ ಹಾಕಿ ನಡೆದ ಡಿಕೆಶಿ..! - DK Shivakumar
ಕಲಾಪಕ್ಕೂ ಮುನ್ನ ಡಿಸಿಎಂ ಪರಮೇಶ್ವರ್ ಅವರ ಹೆಗಲ ಮೇಲೆ ಸಚಿವ ಡಿಕೆ ಶಿವಕುಮಾರ್ ಕೈ ಹಾಕಿ ಶಕ್ತಿ ಸೌಧಕ್ಕೆ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಡಿಸಿಎಂ ಪರಮೇಶ್ವರ್ ಅವರ ಹೆಗಲ ಮೇಲೆ ಕೈ ಹಾಕಿ ಶಕ್ತಿ ಸೌಧಕ್ಕೆ ಆಗಮಿಸುವ ಮೂಲಕ ಗಮನ ಸೆಳೆದ ಸಚಿವ ಡಿಕೆಶಿ
ರೆಸಾರ್ಟ್ನಿಂದ ಹೊರಟ ಬಸ್ ಜೊತೆ ಬಂದಂತ ಉಭಯ ನಾಯಕರು ಮೊದಲಿಗೆ ಕೆಂಗಲ್ ದ್ವಾರ ಪ್ರವೇಶಿಸುವ ಸಂದರ್ಭದಲ್ಲಿ ಕುಚಿಕು ಗೆಳೆಯರಂತೆ ಹೆಗಲ ಮೇಲೆ ಕೈ ಹಾಕಿಕೊಂಡು ರಾಜಕೀಯ ವಿಷಯವನ್ನು ಚರ್ಚಿಸುತ್ತಾ ಬಂದರು. ನಂತರ ಮಾಧ್ಯಮದವರು ಇಂದಿನ ರಾಜಕೀಯದ ಚಲನವಲನ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದಾಗ ಡಿಸಿಎಂ ಪರಮೇಶ್ವರ್ ಕಲಾಪ ಬಳಿಕ ಮಾತನಾಡುತ್ತೇವೆ ಎಂದರು. ಆದ್ರೆ ಡಿಕೆಶಿ ಮಾತ್ರ ಮಾಧ್ಯಮದವರಿಗೆ ಸೆಲ್ಯೂಟ್ ಹೊಡೆದು ಶಕ್ತಿ ಸೌಧಕ್ಕೆ ಎಂಟ್ರಿ ಕೊಟ್ಟರು.