ಬೆಂಗಳೂರು:ಸುಮಾರು ಒಂದು ಗಂಟೆಗಳ ಕಾಲ ಡಿಸಿಎಂ ಪರಮೇಶ್ವರ್ ಹಾಗೂ ಕಾಂಗ್ರೆಸ್ನ ಪ್ರಮುಖ ಮುಖಂಡರು ನಗರದ ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿ ಮಾತುಕತೆ ನಡೆಸಿದ್ದಾರೆ. ಬೆಳಗಿನ ಉಪಹಾರ ಸಭೆಯ ಬಳಿಕ ಕೆಕೆ ಗೆಸ್ಟ್ ಹೌಸ್ಗೆ ಬಂದ ಡಿಸಿಎಂ, ಸಚಿವ ಎಂ.ಬಿ. ಪಾಟೀಲ್, ಕೃಷ್ಣಭೈರೇಗೌಡ ಜೊತೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.
ಗೆಸ್ಟ್ ಹೌಸ್ನಲ್ಲಿ ಡಿಸಿಎಂ ಸಭೆ ... ಕಾಂಗ್ರೆಸ್ ಪ್ರಮುಖ ಸಚಿವರು ಭಾಗಿ - undefined
ಬೆಳಗಿನ ಉಪಹಾರ ಕೂಟದಲ್ಲಿ ಮಹತ್ವದ ಮಾತುಕತೆ ಬಳಿಕ, ಡಿಸಿಎಂ ಕಾಂಗ್ರೆಸ್ನ ಇಬ್ಬರು ಪ್ರಮುಖ ಸಚಿವರ ಜೊತೆ ಗೆಸ್ಟ್ ಹೌಸ್ನಲ್ಲಿ ಸಭೆ ನಡೆಸಿದ್ದಾರೆ.
ಗೆಸ್ಟ್ ಹೌಸ್ನಲ್ಲಿ ಡಿಸಿಎಂ ಸಭೆ
ಸರ್ಕಾರ ಉಳಿಸುವ ಕುರಿತು, ಸಾಮೂಹಿಕ ರಾಜೀನಾಮೆ ಹಾಗೂ ತಮ್ಮ ಸ್ಥಾನಗಳನ್ನು ಕಾಯ್ದುಕೊಳ್ಳುವ ಬಗ್ಗೆ ರಹಸ್ಯ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.