ಬೆಂಗಳೂರು:ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ ಮೊದಲ ವಾರದಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ.. ಈ ಸಂಬಂಧ ಡಿಸಿಎಂ ಹಾಗೂ ಸಾರಿಗೆ ಸಚಿವರು ಆದ ಲಕ್ಷ್ಮಣ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ಭಾಷೆ ಆಧಾರಿತವಲ್ಲ, ಅದು ಸಮುದಾಯಕ್ಕೆ ಸಂಬಂಧಿಸಿದ್ದು: ಡಿಸಿಎಂ ಸವದಿ
ಕರ್ನಾಟಕ ಸರ್ಕಾರದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧಿಸಿ ಕರೆ ನೀಡಿರುವ ಬಂದ್ ಕೈ ಬಿಡುವಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಕನ್ನಡ ಪರ ಸಂಘಟನೆಗಳಿಗೆ ನಾನು ಮನವಿ ಮಾಡುತ್ತೇನೆ. ಪ್ರಾಧಿಕಾರ ಇರುವುದು ಜನಾಂಗದ ಅಭಿವೃದ್ಧಿಗಾಗಿಯೇ ಹೊರತು, ಭಾಷಾ ಆಧಾರಿತವಾಗಿ ಮಾಡಿರುವುದಲ್ಲ.. ಮರಾಠಿಗರು ಅಂದರೆ ಎಂಇಎಸ್ ಎಂಬ ಕಲ್ಪನೆ ಇದೆ.. ಮರಾಠಿ ಏಕೀಕರಣ ಸಮಿತಿಯವರು ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿದ್ದರು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಮರಾಠಿ ಸಮುದಾಯವಿದ್ದು, ಬಹಳಷ್ಟು ಹಿಂದೆ ಉಳಿದಿದೆ. ಬಡತನದಲ್ಲಿ ಬೇಯುತ್ತಿದ್ದು, ಅವರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ನಿಗಮ ರಚನೆ ಮಾಡಲಾಗಿದೆ ಅಂತ ಸಮರ್ಥಿಸಿಕೊಂಡರು.
ಪಿಜಿಆರ್ ಸಿಂಧ್ಯಾ, ನಟ ರಜನಿ ಕಾಂತ್ ಯಾರು? ಅವ್ರೆಲ್ಲರೂ ಇದೇ ಸಮುದಾಯದಿಂದ ಬಂದವರು.. ಹೀಗಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಈ ಬಂದ್ ಕೈ ಬಿಡಬೇಕು ಅಂತ ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದರು..