ಕರ್ನಾಟಕ

karnataka

ETV Bharat / state

ಸಮಾಜ ಕಲ್ಯಾಣ ಖಾತೆ ಶ್ರೀರಾಮುಲುಗೆ ನೀಡಿದ್ದರಿಂದ ಬೇಸರ ಇಲ್ಲ: ಡಿಸಿಎಂ ಕಾರಜೋಳ - DCM karajola on social welfare department to Sriramulu

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಎರಡೂ ಒಂದೇ. ಹಾಗಾಗಿ ಆ ಎರಡೂ ಇಲಾಖೆಗಳನ್ನು ಒಬ್ಬರೇ ನಿರ್ವಹಣೆ ಮಾಡುವುದು ಸೂಕ್ತವೆಂದು ಶ್ರೀರಾಮುಲು ಅವರಿಗೆ ಸಿಎಂ ನೀಡಿದ್ದಾರೆ. ಇದರಿಂದ ನನಗೆ ಯಾವುದೇ ಬೇಸರವಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಡಿಸಿಎಂ ಕಾರಜೋಳ ಹೇಳಿಕೆ
ಡಿಸಿಎಂ ಕಾರಜೋಳ ಹೇಳಿಕೆ

By

Published : Oct 12, 2020, 11:56 AM IST

Updated : Oct 12, 2020, 1:41 PM IST

ಬೆಂಗಳೂರು: ಹೆಚ್ಚುವರಿಯಾಗಿದ್ದ ಸಮಾಜ ಕಲ್ಯಾಣ ಖಾತೆಯನ್ನು ಸಚಿವ ಶ್ರೀರಾಮುಲುಗೆ ನೀಡಿದ್ದರಿಂದ ನನಗೆ ಯಾವುದೇ ಬೇಸರವಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ನನ್ನ ಬಳಿ ಹೆಚ್ಚುವರಿಯಾಗಿತ್ತು. ಅದನ್ನು ಈಗ ಶ್ರೀರಾಮುಲು ಅವರಿಗೆ ಕೊಡಲು ಸಿಎಂ ಉದ್ದೇಶಿಸಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಎರಡೂ ಒಂದೇ. ಹಾಗಾಗಿ ಆ ಎರಡೂ ಇಲಾಖೆಗಳನ್ನು ಒಬ್ಬರೇ ನಿರ್ವಹಣೆ ಮಾಡುವುದು ಸೂಕ್ತ ಎಂದು ಶ್ರೀರಾಮುಲು ಅವರಿಗೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀರಾಮುಲುಗೆ ಸಮಾಜ ಕಲ್ಯಾಣ ಖಾತೆ ನೀಡಿರುವ ಬಗ್ಗೆ ಕಾರಜೋಳ ಹೇಳಿಕೆ

ಅದೇ ರೀತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಸಹ ಒಬ್ಬರಲ್ಲೇ ಇರುವುದು ಸೂಕ್ತ. ಆಡಳಿತದ ದೃಷ್ಟಿಯಿಂದ ಅನುಕೂಲವಾಗುತ್ತದೆ ಎಂದು ಅದನ್ನು ಸಚಿವ ಸುಧಾಕರ್​ಗೆ ನೀಡಿದ್ದಾರೆ‌ ಎಂದು ಕಾರಜೋಳ ಹೇಳಿದರು.

ಕೋವಿಡ್ ಕಾರಣದಿಂದಾಗಿ ಈ ವರ್ಷ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳ ಶಿಕ್ಷಣ ಹಾಳಾಯ್ತು ಅನ್ನೋದೊಂದೇ ನನಗೆ ಬೇಸರ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಸಾವಿರಾರು ಮಕ್ಕಳಿಗೆ ಶಿಕ್ಷಣ, ಊಟ ಮತ್ತು ವಸತಿ ಸಿಗುತ್ತಿತ್ತು. ಈ ವರ್ಷ ಅದಕ್ಕೆ ಕಲ್ಲು ಬಿತ್ತು ಎಂದು ಡಿಸಿಎಂ ಕಾರಜೋಳ ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Oct 12, 2020, 1:41 PM IST

ABOUT THE AUTHOR

...view details