ಕರ್ನಾಟಕ

karnataka

ETV Bharat / state

ಶಿವರಾಜಕುಮಾರ್​ಗೆ ಎಂಪಿ ಟಿಕೆಟ್ ಆಫರ್​ ಕೊಟ್ಟ ಡಿಕೆಶಿ: ಶಿವಣ್ಣ ಹೇಳಿದ್ದೇನು? - ಆರ್ಯ ಈಡಿಗ ಸಮಾವೇಶ

ಕಾಂಗ್ರೆಸ್​ನಿಂದ ಲೋಕಸಭೆಗೆ ಸ್ಪರ್ಧಿಸುವಂತೆ ನಟ ಶಿವರಾಜ್ ಕುಮಾರ್ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ.

dcm-dk-shivakumar-gave-an-mp-ticket-offer-to-actor-shivaraj-kumar
ಶಿವರಾಜ್ ಕುಮಾರ್​ಗೆ ಎಂಪಿ ಟಿಕೆಟ್ ಆಫರ್​ ಕೊಟ್ಟ ಡಿಕೆಶಿ: ಶಿವಣ್ಣ ಹೇಳಿದ್ದೇನು?

By ETV Bharat Karnataka Team

Published : Dec 10, 2023, 6:48 PM IST

ಬೆಂಗಳೂರು: ಪಾರ್ಲಿಮೆಂಟ್​ ಚುನಾವಣೆಗೆ ತಯಾರಾಗಲು ಶಿವಣ್ಣಗೆ ಹೇಳಿದ್ದೇನೆ. ಅವರು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಿದರೂ ಟಿಕೆಟ್ ನೀಡುವುದಾಗಿ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಘೋಷಿಸಿದ್ದಾರೆ. ನಗರದಲ್ಲಿ ಇಂದು ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, "ಶಿವಣ್ಣ ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅವುಗಳ ಚಿತ್ರೀಕರಣ ಮುಗಿಯಬೇಕು ಎಂದಿದ್ದಾರೆ. ಚಿತ್ರ ಯಾವಾಗಾದರೂ ಮಾಡಬಹುದು, ಆದರೆ ಪಾರ್ಲಿಮೆಂಟ್​ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದೇನೆ. ಅವರ ನಿರ್ಧಾರಕ್ಕಾಗಿ ಎದುರು ನೋಡುತ್ತಿದ್ದೇನೆ'' ಎಂದರು.

ಬಳಿಕ ಮಾತನಾಡಿದ ಶಿವರಾಜಕುಮಾರ್, ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ನಮ್ಮ ತಂದೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕೇಳಿ ಕೊಟ್ಟಿದ್ದಾರೆ, ಅದೇ ಸಾಕು ನಮಗೆ. ಬಂಗಾರಪ್ಪನವರ ಮಗಳನ್ನು ನಮ್ಮ ಮನೆಗೆ ತಂದಿದ್ದೇವೆ, ಅವರೂ ನಮಗೆ ರಾಜಕೀಯಕ್ಕೆ ಆಹ್ವಾನಿಸಿರಲಿಲ್ಲ. ರಾಜಕೀಯವೇನಿದ್ದರೂ ಗೀತಾಗೆ, ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ಅವರ ಹಿಂದೆ ನಿಂತು ಬೆಂಬಲ ಕೊಡುತ್ತೇನೆ'' ಎಂದರು.

ಇದನ್ನೂ ಓದಿ:ಆರ್ಯ ಈಡಿಗ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯ

ABOUT THE AUTHOR

...view details