ಕರ್ನಾಟಕ

karnataka

ಜಪಾನ್‌ ಕಾನ್ಸುಲೇಟ್ ಜನರಲ್‌ ಜತೆ ಚರ್ಚೆ ನಡೆಸಿದ ಡಿಸಿಎಂ ಅಶ್ವತ್ಥನಾರಾಯಣ

By

Published : Jul 22, 2021, 5:30 PM IST

ಬೆಂಗಳೂರಿನ ಜಪಾನ್‌ ಕಾನ್ಸುಲೇಟ್‌ ಜನರಲ್‌ ಅಕಿಕೋ ಸುಗಿಟಾ ಅವರೊಂದಿಗೆ ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತುಕತೆ ನಡೆಸಿದರು.

ashwatth
ashwatth

ಬೆಂಗಳೂರು:ರಾಜ್ಯದಲ್ಲಿ ಜಪಾನ್‌ ದೇಶದ ಬಂಡವಾಳ ಹೂಡಿಕೆಯೂ ಸೇರಿ ವಿವಿಧ ವಿಷಯಗಳ ಬಗ್ಗೆ ಬೆಂಗಳೂರಿನ ಜಪಾನ್‌ ಕಾನ್ಸುಲೇಟ್‌ ಜನರಲ್‌ ಅಕಿಕೋ ಸುಗಿಟಾ ಅವರೊಂದಿಗೆ ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ವಿಕಾಸಸೌಧದಲ್ಲಿ ಇಂದು ಮಾತುಕತೆ ನಡೆಸಿದರು.

ಶೀಘ್ರದಲ್ಲೇ ಬೆಂಗಳೂರು ಟೆಕ್‌ ಸಮಿಟ್‌ ಕೂಡ ನಡೆಯುತ್ತಿದ್ದು, ಜಪಾನ್‌ ಆವಿಷ್ಕಾರ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಟೆಕ್‌ ಸಮಿಟ್‌ನಲ್ಲಿ ಆ ದೇಶದ ಪಾಲುದಾರಿಕೆ ಬಗ್ಗೆಯೂ ಡಿಸಿಎಂ ಚರ್ಚೆ ನಡೆಸಿದರು.

ಕೋವಿಡ್‌ಗೂ ಮುನ್ನ, ನಂತರವೂ ಕರ್ನಾಟಕ ಮತ್ತು ಜಪಾನ್‌ ನಡುವೆ ಕೈಗಾರಿಕೆ-ವಾಣಿಜ್ಯ ಸಂಬಂಧಗಳು ಬಲವಾಗಿದೆ. ರಾಜ್ಯದಲ್ಲಿ ಟೊಯೋಟಾ, ಹೋಂಡಾ, ಫಿಜಿತ್ಸೂ, ಕೊಮತ್ಸೂ, ಹಿತಾಚಿ ಸೇರಿದಂತೆ 529 ಜಪಾನೀ ಕಂಪನಿಗಳು ನೆಲೆಯೂರಿವೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಹೂಡಿಕೆಯನ್ನು ಜಪಾನ್‌ನಿಂದ ರಾಜ್ಯವೂ ನಿರೀಕ್ಷೆ ಮಾಡುತ್ತಿದೆ. ಈ ಬಗ್ಗೆಯೂ ಜಪಾನ್‌ ಕಾನ್ಸುಲೇಟ್‌ ಜನರಲ್‌ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಡಿಸಿಎಂ ತಿಳಿಸಿದರು.

ABOUT THE AUTHOR

...view details