ಕರ್ನಾಟಕ

karnataka

ETV Bharat / state

68 ಸಿಬ್ಬಂದಿಗೆ ಕೊರೊನಾ ಟೆಸ್ಟ್ ನೆಗೆಟಿವ್ : ಡಿಸಿಎಂ ಡಾ. ಅಶ್ವತ್ಥನಾರಾಯಣ - DCM Ashwattanarayan reaction

ಪಾದರಾಯನಪುರ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ಒಟ್ಟು 68 ಮಂದಿಗೆ ಹಾಗೂ ಅವರ ಮೊದಲ ಸಂಪರ್ಕಕ್ಕೆ ಬಂದ್ದಿದ್ದ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಎಲ್ಲರಿಗೆ ನೆಗೆಟಿವ್ ಫಲಿತಾಂಶ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

DCM Ashwattanarayan
ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ

By

Published : Apr 28, 2020, 12:40 AM IST

ಬೆಂಗಳೂರು :ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ರಾಮನಗರ ಆಸ್ಪತ್ರೆಯಲ್ಲಿ ನೋಡಿಕೊಂಡ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲರ ಫಲಿತಾಂಶವು ನೆಗೆಟಿವ್ ಬಂದಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ರಾಮನಗರ ಆಸ್ಪತ್ರೆಯಲ್ಲಿ ಪಾದರಾಯನಪುರ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ಜೈಲು ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಚಾಲಕರು ಸೇರಿದಂತೆ ಒಟ್ಟು 68 ಮಂದಿಗೆ ಹಾಗೂ ಅವರ ಮೊದಲ ಸಂಪರ್ಕಕ್ಕೆ ಬಂದ್ದಿದ್ದ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲರಿಗೆ ನೆಗೆಟಿವ್ ಫಲಿತಾಂಶ ಬಂದಿರುವುದು ನನಗೆ ತುಂಬಾ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ .

ಅಷ್ಟೇ ಅಲ್ಲದೆ ಇವರ ಕುಟುಂಬ ಸದಸ್ಯರೂ ತಪಾಸಣೆಗೊಪಟ್ಟಿದ್ದು, ಅವರಿಗೂ ಯಾವುದೇ ಸೋಂಕು ತಗುಲಿರುವುದಿಲ್ಲ. ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ ನಂತರ ಸರ್ಕಾರವೂ ಎಳ್ಳಷ್ಟ್ಟು ಎಚ್ಚರ ತಪ್ಪದೆ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಗಿದ್ದು, ಫಲಿತಾಂಶವೂ ನೆಗೆಟಿವ್ ಬಂದಿದೆ. ಆದರೂ ಅವರನ್ನು ಇನ್ನು 12 ದಿನ ರಾಮನಗರದ ಹಾಸ್ಟೆಲ್ ವೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್​​ನಲ್ಲೇ ಇಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ವಾರಂಟೈನ್ ಮುಗಿದ ಮೇಲೆ ಮತ್ತೊಮ್ಮೆ ಇವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು. ಈ ಮೂಲಕ ಹಸಿರು ವಲಯ ಆಗಿದ್ದ ರಾಮನಗರ ಜಿಲ್ಲೆಯನ್ನು ಕೊರೊನಾ ಅಪಾಯಕ್ಕೆ ತಳ್ಳಾಯಿತು ಎಂಬ ಆತಂಕ ನಿವಾರಣೆ ಆದಂತೆ ಆಗಿದೆ. ಆದರೂ ಜಿಲ್ಲೆಯಲ್ಲಿ ಸರ್ಕಾರ ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details