ಕರ್ನಾಟಕ

karnataka

ETV Bharat / state

ಚಿತ್ರಮಂದಿರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು: ಡಿಸಿಎಂ ಅಶ್ವತ್ಥ ನಾರಾಯಣ - ಕೊರೊನಾ ಹೊಡೆತಕ್ಕೆ ಚಿತ್ರರಂಗ

ಕೇಂದ್ರ ಸರ್ಕಾರದಿಂದ ನೂರರಷ್ಟು ಅನುಮತಿ ನೀಡಿದರೂ ರಾಜ್ಯ ಐವತ್ತಕ್ಕೆ ಮಾತ್ರ ಅವಕಾಶ ನೀಡಿದೆ. ಕೊರೊನಾ ಹೊಡೆತಕ್ಕೆ ಚಿತ್ರರಂಗ ಕೊಚ್ಚಿ ಹೋಗಿದೆ. ಚಿತ್ರ ಮಂಡಳಿಗೆ ನಷ್ಟ ಉಂಟಾಗಿ, ರಾಜ್ಯಕ್ಕೂ ನಷ್ಟವಾಗಿದೆ.

dcm-ashwathth-narayana-talk
ಡಿಸಿಎಂ ಅಶ್ವತ್ಥ್ ನಾರಾಯಣ

By

Published : Feb 3, 2021, 6:41 PM IST

ಬೆಂಗಳೂರು: ನಮ್ಮ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲು ಥಿಯೇಟರ್​​ಗೆ ಶೇ. 50ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಶೀಘ್ರವೇ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಡಿಸಿಎಂ ಅಶ್ವತ್ಥ್ ನಾರಾಯಣ

ಓದಿ: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ವಿವಾದ: ಸರ್ಕಾರದ ವಿರುದ್ಧ ಸ್ಯಾಂಡಲ್​​ವುಡ್​​​ ಅಸಮಾಧಾನ!

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದ ಗೈಡ್ ಲೈನ್ ಪ್ರಕಾರ ಶೇ. 100ರಷ್ಟು ಅವಕಾಶ ನೀಡಿದೆ. ಶೇ. 50 ರಷ್ಟಿದ್ದಾಗ ಥಿಯೇಟರ್ ನಡೆಸಲು ಸಾಧ್ಯವಿಲ್ಲ. ನೂರರಷ್ಟು ನೀಡಬೇಕು ಅಂತ ಒತ್ತಾಯ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ವಾಣಿಜ್ಯ ಮಂಡಳಿ ಜೊತೆ ಸಭೆ ಕರೆಯಲಾಗಿದೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು. ಸಿನಿಮಾ ಕೂಡ ನಡೆಯಬೇಕು, ವೀಕ್ಷಕರ ಆರೋಗ್ಯವೂ ಕಾಪಾಡಬೇಕು. ಫ್ಲೈಟ್‌ನಲ್ಲೂ ಏರ್ ಕಂಡೀಶನ್ ಇದೆ. ತಾತ್ಕಾಲಿಕವಾಗಿ ಈ ಕ್ರಮ ವಹಿಸಲಾಗಿದೆ. ಒಂದು ವರ್ಷದಿಂದ ಈ ಸಮಸ್ಯೆ ಎದುರಾಗಿದೆ. ಚಿತ್ರೋದ್ಯಮ ನಷ್ಟದಲ್ಲಿ ನಡೆಯುತ್ತಿದೆ. ವಾಣಿಜ್ಯ ಮಂಡಳಿ ಸದಸ್ಯರು ಸರ್ಕಾರವನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ 100% ಅವಕಾಶ ನೀಡಬೇಕು:

ಇದೇ ವೇಳೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಹಿಂದೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಶೇ. 100ರಷ್ಟು ಬಿಟ್ಟಾಗ, ರಾಜ್ಯದಲ್ಲೂ ನೂರರಷ್ಟು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈಗ ಮುಂಜಾಗ್ರತಾ ಕ್ರಮವಾಗಿ ನೂರರಷ್ಟು ಅವಕಾಶ ನೀಡಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ABOUT THE AUTHOR

...view details