ಬೆಂಗಳೂರು: ಖ್ಯಾತ ಲೇಖಕ ಅವಿ ಜೂರಿಚ್ ಇಂಗ್ಲಿಷ್‌ನಲ್ಲಿ ಬರೆದಿರುವ ‘Thou Shalt Innovate’ ಕೃತಿಯ ಕನ್ನಡ ಅನುವಾದ ಕೃತಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು.
ವಿಧಾನಸೌಧದಲ್ಲಿ ಕೃತಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಅನೇಕ ಗಣ್ಯರು ಭಾಗಿಯಾಗಿದ್ದರು. ವಿಶ್ವೇಶ್ವರ ಭಟ್ ಅವರು ʼಆವಿಷ್ಕಾರದ ಹರಿಕಾರʼ ಹೆಸರಿನಲ್ಲಿ ಕನ್ನಡಕ್ಕೆ ಇಂಗ್ಲಿಷ್ ಕೃತಿಯನ್ನು ಅನುವಾದ ಮಾಡಿದ್ದು, ಆ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಕೃತಿ ಬಿಡುಗಡೆ ನಂತರ ಮಾತನಾಡಿದ ಅಶ್ವತ್ಥ ನಾರಾಯಣ, ಕೇವಲ 70 ಲಕ್ಷ ಜನರನ್ನು ಒಳಗೊಂಡಿರುವ ಇಸ್ರೇಲ್ ದೇಶ ಕೇವಲ ಸೈಬರ್ ಭದ್ರತೆಯಲ್ಲಿ 150 ಮಿಲಿಯನ್ ಡಾಲರ್ ಆದಾಯವನ್ನೂ ಗಳಿಸುತ್ತಿದೆ. ಇಲ್ಲಿ ಸಹ ಸ್ಟಾರ್ಟ್ಅಪ್ಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ.