ಕರ್ನಾಟಕ

karnataka

ETV Bharat / state

ವಿವಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿ ಮಾಡದ ಕುಲಪತಿಗಳ ನಡೆಗೆ ಡಿಸಿಎಂ ಅಶ್ವತ್ಥ ನಾರಾಯಣ ಅಸಮಾಧಾನ - ವಿಶ್ವವಿದ್ಯಾಲಯಗಳಲ್ಲಿ ಇ- ಆಫೀಸ್ ವ್ಯವಸ್ಥೆ ಸುದ್ದು

ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲಾ ವಿವಿಗಳು ಇನ್ನೂ ಮಾಡುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಜನವರಿ‌ ಒಂದರಿಂದಲೇ ಇದೆಲ್ಲಾ ಸಾಧ್ಯವಾಗಬೇಕು. ಒಂದು ವೇಳೆ ತಪ್ಪಿದರೆ ನಾನೇ ಖುದ್ದು ವಿವಿಗೆ ಬಂದು ವ್ಯವಸ್ಥೆ ಮಾಡಿಸಬೇಕಾಗುತ್ತದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಎಚ್ಚರಿಕೆ‌‌ ನೀಡಿದರು.

DCM Ashwathnarayan
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

By

Published : Dec 21, 2020, 9:59 PM IST

ಬೆಂಗಳೂರು:ಉನ್ನತ ಶಿಕ್ಷಣವನ್ನು ಮತ್ತಷ್ಟು ಉತ್ತಮಗೊಳಿಸುವ ಹಾಗೂ ವಿಶ್ವವಿದ್ಯಾಲಯಗಳ ಆಡಳಿತಕ್ಕೆ ವೇಗ ಕೊಟ್ಟು ಪಾರದರ್ಶಕಗೊಳಿಸುವ ಇ-ಆಫೀಸ್‌ ವ್ಯವಸ್ಥೆಯನ್ನು ಇನ್ನೂ ಜಾರಿ ಮಾಡದ ವಿವಿಗಳ ಕುಲಪತಿಗಳ ಕಾರ್ಯವೈಖರಿ ಬಗ್ಗೆ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಸ್ವಾಮ್ಯದ 22 ವಿವಿಗಳ ಕುಲಪತಿಗಳ ಜತೆ ವರ್ಚುಯಲ್ ಸಂವಾದ ನಡೆಸಿದ ಅವರು, ವಿವಿಗಳ ಆಡಳಿತದಲ್ಲಿ ಪಾರದರ್ಶಕತೆ ತರುವುದರ ಜತೆಗೆ ಜನರಿಗೆ ಉತ್ತರದಾಯಿತ್ವವಾಗಿರಲು ಇ-ಆಫೀಸ್‌ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕೆಲ ವಿವಿಗಳು ಮಾತ್ರ ಈ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಮಾತ್ರ ಜಾರಿ ಮಾಡಿದ್ದು, ಇನ್ನು ಕೆಲ ವಿವಿಗಳು ಇನ್ನೂ ಜಾರಿ ಮಾಡಿಲ್ಲ. ಇದು ಖಂಡಿತಾ ಸರಿಯಲ್ಲ ಎಂದರು.

ಇದನ್ನೂ ಓದಿ:ಬೆಂಗಳೂರು ಗಲಭೆ ಪ್ರಕರಣ: ಎಸ್​ಡಿಪಿಐ ಅಧ್ಯಕ್ಷ ಸೇರಿ 17 ಮಂದಿ ಆರೋಪಿಗಳ ಬಂಧನ

ಜನವರಿ 1ರಿಂದ ಎಲ್ಲಾ ವಿವಿಗಳಲ್ಲೂ ಇ-ಆಫೀಸ್‌ ಜಾರಿಯಾಗಲೇಬೇಕು. ಈಗಾಗಲೇ ನನ್ನ ಕಚೇರಿ, ಕಾಲೇಜು, ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿರುವ ಎಲ್ಲಾ ಕಚೇರಿಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಾಗಿ ಹೊಸ ವರ್ಷದ ಮೊದಲ ದಿನದಿಂದಲೇ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ನಡುವಿನ ಎಲ್ಲಾ ವ್ಯಹಹಾರ ಆನ್‌ಲೈನ್‌ ಮೂಲಕವೇ ನಡೆಯಲಿದೆ. ಪತ್ರ ವ್ಯವಹಾರ ಅಥವಾ ಕಡತ ರವಾನೆಗೆ ಅವಕಾಶವೇ ಇರುವುದಿಲ್ಲ ಎಂದು ಡಾ. ಅಶ್ವತ್ಥ ನಾರಾಯಣ ಸ್ಪಷ್ಟವಾಗಿ ಹೇಳಿದರು.

ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲಾ ವಿವಿಗಳು ಇನ್ನೂ ಮಾಡುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಜನವರಿ‌ ಒಂದರಿಂದಲೇ ಇದೆಲ್ಲ ಸಾಧ್ಯವಾಗಬೇಕು. ಒಂದು ವೇಳೆ ತಪ್ಪಿದರೆ ನಾನೇ ಖುದ್ದು ವಿವಿಗೆ ಬಂದು ವ್ಯವಸ್ಥೆ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಕೆ‌‌ ನೀಡಿದರು.

ಮೂರು ದಿನ ಗಡುವು

ಇ-ಆಡಳಿತ ಇಲಾಖೆ ಮತ್ತು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಅತ್ಯಂತ ವೈಜ್ಞಾನಿಕವಾಗಿ ರೂಪಿಸಿರುವ ಏಕೀಕೃತ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆ ಎಲ್ಲಾ ವಿವಿಗಳಲ್ಲೂ ಕಡ್ಡಾಯವಾಗಿ ಜಾರಿಯಾಗಲೇಬೇಕು. ಇದರ ಬಗ್ಗೆ ಅಧ್ಯಯನ ಮಾಡಲು ವಿವಿಧ ಕುಲಪತಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗಳು ಆಯಾ ಮಾಡ್ಯೂಲ್ಸ್​​​ಗೆ ಸಂಬಂಧಿಸಿದಂತೆ ಮೂರು ದಿನಗಳಲ್ಲಿ ವರದಿಗಳನ್ನು ತಪ್ಪದೇ ನೀಡಬೇಕು ಎಂದು ಡಿಸಿಎಂ, ಸಂಬಂಧಿತ ಕುಲಪತಿಗಳಿಗೆ ಗಡುವು ನೀಡಿದರು.

ABOUT THE AUTHOR

...view details