ಕರ್ನಾಟಕ

karnataka

ETV Bharat / state

ಮೋಹನ್ ರಾಜ್ ಉಪಮೇಯರ್ ಅಭ್ಯರ್ಥಿ ಅಲ್ಲ: ಡಿಸಿಎಂ ಸ್ಪಷ್ಟನೆ - ಉಪಮುಖ್ಯ ಮಂತ್ರಿ ಅಶ್ವಥ್ ನಾರಾಯಣ್

ಉಪಮೇಯರ್​ ಅಭ್ಯರ್ಥಿಗಳು ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಲು ಅಭ್ಯರ್ಥಿಗಳ ಹೆಸರಿಗಾಗಿ ಡಿಸಿಎಂ ಅಶ್ವಥ್​ ನಾರಾಯಣ ತಡಕಾಡಿದರು. ಉಪಮೇಯರ್ ಯಾರು ? ಮೇಯರ್ ಯಾರು? ಅಂದಿದಕ್ಕೆ ಅವರು ಕೆಲಕ್ಷಣ ತಬ್ಬಿಬ್ಬಾದರು ಇಷ್ಟರಲ್ಲೇ ಗೊತ್ತಾಗಲಿದೆ ಎಂದರು.

ಉಪಮುಖ್ಯ ಮಂತ್ರಿ ಅಶ್ವಥ್ ನಾರಾಯಣ್

By

Published : Oct 1, 2019, 12:23 PM IST

ಬೆಂಗಳೂರು:ಮೇಯರ್​, ಉಪಮೇಯರ್​ ಅಭ್ಯರ್ಥಿಗಳು ಯಾರೆಂದು ತಿಳಿಯದೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಕೆಲಕಾಲ ಗೊಂದಲಕ್ಕೀಡಾದರು.

ಬಿಬಿಎಂಪಿ ಮೇಯರ್ ಚುನಾವಣೆಗೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸದ್ಯ ಬಿಜೆಪಿ ಗೊಂದಲದ ಗೂಡಾಗಿದೆ. ಅಭ್ಯರ್ಥಿ ಆಯ್ಕೆ ಮಾಡಲು ಮತ್ತೆ ಬಿಜೆಪಿ ನಾಯಕರು ನಗರದ ಖಾಸಗಿ ಹೋಟೆಲ್​ನಲ್ಲಿ ಸಭೆ ಸೇರಿದ್ದಾರೆ.

ಉಪಮುಖ್ಯ ಮಂತ್ರಿ ಅಶ್ವಥ್ ನಾರಾಯಣ್

ಇದೇ ಸಮಯದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್​ ನಾರಾಯಣ್ ಅವರು​ ಮೇಯರ್, ಉಪಮೇಯರ್​ ಅಭ್ಯರ್ಥಿಗಳು ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ತಿಳಿಯದೆ ಅಭ್ಯರ್ಥಿಗಳ ಹೆಸರಿಗಾಗಿ ತಡಕಾಡಿದರು. ಉಪಮೇಯರ್ ಯಾರು ? ಮೇಯರ್ ಯಾರು? ಅಂದಿದಕ್ಕೆ ತಬ್ಬಿಬ್ಬಾಗಿ, ಅಭ್ಯರ್ಥಿಗಳ ಹೆಸರನ್ನ ಹೇಳಿದ್ರು. ಅಲ್ಲದೆ ಮೋಹನ್ ರಾಜ್ ಉಪಮೇಯರ್ ಅಭ್ಯರ್ಥಿ ಅಲ್ಲವೆಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಸೂಚನೆ ಮೇರೆಗೆ ಮೇಯರ್​ ಹುದ್ದೆಗೆ ಇಬ್ಬರು ಮತ್ತು ಉಪಮೇಯರ್ ಹುದ್ದೆಗೆ 2 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೇಯರ್ ಹುದ್ದೆಗೆ ಗೌತಮ್ ಕುಮಾರ್, ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದ್ದು, ಉಪಮೇಯರ್ ಹುದ್ದೆಗೆ ಗುರುಮೂರ್ತಿ ರೆಡ್ಡಿ, ಮಹಾಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.

ABOUT THE AUTHOR

...view details