ಕರ್ನಾಟಕ

karnataka

ETV Bharat / state

ಈ ವರ್ಷವೇ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್: ಅಶ್ವತ್ಥ ನಾರಾಯಣ - DCM Ashwaththanarayana news

7.5 ಸಾವಿರ ಡಿಗ್ರಿ ಕಾಲೇಜುಗಳ ಪೈಕಿ ಮೊದಲು 2.5 ಸಾವಿರ ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ಜಾರಿಗೆ ತರುತ್ತೇವೆ. 3 ತಿಂಗಳ ಒಳಗೆ ಎಲ್ಲಾ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ಅನುಷ್ಠಾನ ಮಾಡುತ್ತೇವೆ. ಮೊದಲು ಸರ್ಕಾರಿ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ತರುತ್ತೇವೆ. ಬಳಿಕ ಅನುದಾನಿತ ಕಾಲೇಜುಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥನಾರಾಯಣ
ಡಿಸಿಎಂ ಅಶ್ವತ್ಥನಾರಾಯಣ

By

Published : Dec 4, 2020, 4:58 PM IST

ಬೆಂಗಳೂರು:ಸರ್ಕಾರಿ ಡಿಗ್ರಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳಲ್ಲಿ ಈ ವರ್ಷವೇ ಸ್ಮಾರ್ಟ್ ಕ್ಲಾಸ್ ಜಾರಿಗೆ ತರುತ್ತೇವೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ‌ ಮಾತನಾಡಿದ ಅವರು, ಹಂತ ಹಂತವಾಗಿ ಎಲ್ಲಾ ಕಾಲೇಜಿ‌ನಲ್ಲಿ ಸ್ಮಾರ್ಟ್ ಕ್ಲಾಸ್ ಜಾರಿಗೆ ತರುತ್ತೇವೆ. 7.5 ಸಾವಿರ ಡಿಗ್ರಿ ಕಾಲೇಜು ಗಳ ಪೈಕಿ ಮೊದಲು 2.5 ಸಾವಿರ ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ಜಾರಿಗೆ ತರುತ್ತೇವೆ. 3 ತಿಂಗಳ ಒಳಗೆ ಎಲ್ಲಾ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ಅನುಷ್ಠಾನ ಮಾಡುತ್ತೇವೆ. ಮೊದಲು ಸರ್ಕಾರಿ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ತರುತ್ತೇವೆ. ಬಳಿಕ ಅನುದಾನಿತ ಕಾಲೇಜುಗಳ ಬಗ್ಗೆ ತೀರ್ಮಾನ ಮಾಡುತ್ತೇವೆ. ತಂತ್ರಜ್ಞಾನದ ಮೂಲಕ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು ಈ ಸ್ಮಾರ್ಟ್ ಕ್ಲಾಸ್​ನ ಉದ್ದೇಶವಾಗಿದೆ ಎಂದರು.

ಸರ್ಕಾರಿ ಕಾಲೇಜುಗಳ ಕ್ಲಾಸ್ ರೂಮ್​​ನಲ್ಲಿ ಎಲ್ಲಾ ಆಧುನಿಕ‌ ತಂತ್ರಜ್ಞಾನ ಬಳಸಿ ತರಗತಿಯನ್ನು ಮಾಡಲಾಗುತ್ತದೆ. ಪವರ್ ಪಾಯಿಂಟ್ ಪ್ರೆಸೆಂಟೇಷನ್, ವೈ ಫೈ ಸಂಪರ್ಕದ ಮೂಲಕ ಖಾಸಗಿ ಕಾಲೇಜಿನಲ್ಲಿ ‌ನೀಡಲಾಗುವ ಉನ್ನತ ಮಟ್ಟದ ಶಿಕ್ಷಣವನ್ನು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ನೀಡಲಾಗುತ್ತದೆ ಎಂದರು.

ಡಿಪ್ಲೊಮಾ ಶಿಕ್ಷಣದಲ್ಲಿ ದೊಡ್ಡ ಸುಧಾರಣೆ:

ಡಿಪ್ಲೊಮಾ ಶಿಕ್ಷಣದಲ್ಲಿ ದೊಡ್ಡ ಸುಧಾರಣೆ ತರಲು ಸರ್ಕಾರ ಮುಂದಾಗಿದೆ ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು.

ಓದಿ:ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ಸಭೆಯಲ್ಲಿ ಡಿಪ್ಲೊಮಾ ಎಜುಕೇಶನ್ ಪಠ್ಯ ಬದಲಾವಣೆ ಬಗ್ಗೆ ಚರ್ಚೆ ಆಗಿದೆ. ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಶನ್ ಮಾನದಂಡಕ್ಕೆ ಅನುಗುಣವಾಗಿ ಪಠ್ಯ ಕ್ರಮ ರೂಪಿಸಲಾಗ್ತಿದೆ. ಕೈಗಾರಿಕಾ ಅಗತ್ಯತೆಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿ ವರ್ಷ 40 ಸಾವಿರ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಪಠ್ಯ ಕ್ರಮ ರೂಪಿಸುತ್ತಿದ್ದೇವೆ‌ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು, ಉನ್ನತ ಶಿಕ್ಷಣ ಪರಿಷತ್ ಮಾದರಿಯಲ್ಲೇ ಪ್ರಾಥಮಿಕ ಶಿಕ್ಷಣ ಪರಿಷತ್ ರೂಪಿಸಲು ಹಾಗು ಅದಕ್ಕೆ ಪೂರಕವಾದ ಮೂರು ಕಾಯ್ದೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.‌ ಕರ್ನಾಟಕ ಎಲ್​ಎಮ್​​ಎಸ್​ನಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪಕ್ಷ ಭೇದ ಮರೆತು ಎಲ್ಲಾ ಪರಿಷತ್ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ರಾಜ್ಯದಲ್ಲಿ ಮೊದಲು ಈ ನೀತಿ ಜಾರಿಗೆ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ABOUT THE AUTHOR

...view details