ಕರ್ನಾಟಕ

karnataka

ETV Bharat / state

ಸಿಎಂ‌ ಪುತ್ರನ ಹಸ್ತಕ್ಷೇಪ, ದರ್ಬಾರ್ ಆರೋಪ: ಸ್ಪಷ್ಟನೆ ಕೊಟ್ಟ ಡಿಸಿಎಂ - London Traffic Management

ಬೆಂಗಳೂರು ಅಭಿವೃದ್ಧಿ ಕುರಿತ ಸಬೆಯಲ್ಲಿ ಸಿಎಂ‌ ಪುತ್ರ ವಿಜಯೇಂದ್ರ ಭಾಗಿಯಾಗಿದ್ದು, ಮತ್ತೆ ಸರ್ಕಾರದಲ್ಲಿ ವಿಜಯೇಂದ್ರ ದರ್ಬಾರ್ ಶುರುವಾಯಿತಾ? ಅಮಿತ್ ಷಾ ಸೂಚನೆ ಉಲ್ಲಂಘಿಸಿ ವಿಜಯೇಂದ್ರ ಸಭೆಯಲ್ಲಿ ಭಾಗಿಯಾಗಿದ್ದರಾ ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರು ಅಭಿವೃದ್ಧಿಯಲ್ಲೂ ಸಿಎಂ‌ ಪುತ್ರನ ಹಸ್ತಕ್ಷೇಪ; ಮತ್ತೆ ಸರ್ಕಾರದಲ್ಲಿ ವಿಜಯೇಂದ್ರ ದರ್ಬಾರ್

By

Published : Oct 17, 2019, 8:35 PM IST

ಬೆಂಗಳೂರು: ಬೆಂಗಳೂರು ಸಂಚಾರ ಸುಗಮಗೊಳಿಸುವ ಬಗ್ಗೆ ಲಂಡನ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಮುಖ್ಯಸ್ಥರೊಂದಿಗೆ ಬಿಎಂಆರ್​ಡಿಎ ಕಚೇರಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸಭೆ ನಡೆಸಿದರು.

ಬೆಂಗಳೂರು ಅಭಿವೃದ್ಧಿಯಲ್ಲೂ ಸಿಎಂ‌ ಪುತ್ರನ ಹಸ್ತಕ್ಷೇಪ; ಮತ್ತೆ ಸರ್ಕಾರದಲ್ಲಿ ವಿಜಯೇಂದ್ರ ದರ್ಬಾರ್?

ಇನ್ನು ಈ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಬಿಎಂಟಿಸಿ ಎಂಡಿ ಶಿಖಾ, ಟ್ರಾಫಿಕ್ ಕಮಿಷನರ್ ರವಿಕಾಂತೇಗೌಡರು, ಬಿ ಪ್ಯಾಕ್ ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು. ಆದರೆ, ಬಿ. ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭಾಗಿಯಾಗಿ ಅಚ್ಚರಿ ಮೂಡಿಸಿದ್ದು, ಮತ್ತೆ ಸರ್ಕಾರದಲ್ಲಿ ವಿಜಯೇಂದ್ರ ದರ್ಬಾರ್ ಶುರುವಾಯಿತಾ? ಅಮಿತ್ ಷಾ ಸೂಚನೆ ಉಲ್ಲಂಘಿಸಿ ವಿಜಯೇಂದ್ರ ಸಭೆಯಲ್ಲಿ ಭಾಗಿಯಾಗಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಜಯೇಂದ್ರ ಭಾಗಿ ಸಂಬಂಧ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು, ಇದು ಸರ್ಕಾರದಿಂದ ಮಾಡಿರೋ ಸಭೆಯಲ್ಲ ಬದಲಾಗಿ ಬಿ ಪ್ಯಾಕ್ ಮಾಡಿದ್ದ ಸಭೆ.‌ ಬೆಂಗಳೂರಿನ ಸಂಚಾರ ದಟ್ಟಣೆ ಸುಗಮಗೊಳಿಸಲು ಅನುಕೂಲವಾಗುವಂತೆ ಪರಿಣಿತರ ಸಭೆ ನಡೆಸಿತು. ಲಂಡನ್​ನ ಸಂಚಾರ ಮುಖ್ಯಸ್ಥರಾದ ವರ್ಮಾ ಮತ್ತು ಬೆನ್ ಅವರ ಜೊತೆ ಮಾತುಕತೆಯಲ್ಲಿ ಭಾಗಿಯಾಗಿದ್ದು ಅಷ್ಟೇ ಅಂತ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details