ಕರ್ನಾಟಕ

karnataka

ETV Bharat / state

ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್​ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ನೀಡಿ ಹೋರಾಟಗಾರರ ಮನವೊಲಿಸಿದ್ದಾರೆ.

ಅಶ್ವಥ್ ನಾರಾಯಣ್ ಭೇಟಿ

By

Published : Nov 8, 2019, 3:05 AM IST

ಬೆಂಗಳೂರು:ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕು ಎಂದು ಆಗ್ರಹಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್​ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಡಿಸಿಎಂ ಡಾ.ಸಿ ಅಶ್ವಥ್ ನಾರಾಯಣ ಭೇಟಿ ನೀಡಿ ಹೋರಾಟಗಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಡಿಸಿಎಂ ಭೇಟಿ ನೀಡಿದ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿಯವರು ಡಿಸಿಎಂರನ್ನು ತರಾಟೆಗೆ ತೆಗೆದುಕೊಂಡರು. ಹೋರಾಟಗಳನ್ನು, ಚಳವಳಿಗಳನ್ನು ಪೊಲೀಸ್​ ಅಥವಾ ಸರ್ಕಾರಗಳು ನಿಯಂತ್ರಣ ಮಾಡುವುದಲ್ಲ. ನಮಗೆ ನಮ್ಮದೇ ಆದ ಸ್ವಾತಂತ್ರ್ಯ ಇದೆ. ನಮ್ಮ ನೋವಿನ ದನಿಯನ್ನು ಹೊರಹಾಕುವ ವೇದಿಕೆ ಹೋರಾಟ, ಪ್ರತಿಭಟನೆಗಳು ಆಗಿದೆ. ಇಂದು ನಮ್ಮನ್ನು ನಡೆಸಿಕೊಂಡಿದ್ದು ಅಮಾನವೀಯವಾಗಿದೆ ಎಂದು ಎಚ್.ಎಸ್ ದೊರೆಸ್ವಾಮಿ ಅವರು ಡಿಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ನಂತರ ಪ್ರತಿಭಟನಾ ನಿರತರ ಜೊತೆ ಮಾತನಾಡಿದ ಡಿಸಿಎಂ, ಮದ್ಯ ಸಮಾಜಕ್ಕೆ ಬೇಕಿರುವ ವಸ್ತು ಅಲ್ಲ. ಅದು ಯಾವ ಸಮಾಜಕ್ಕೂ ಪ್ರಯೋಜನಕಾರಿ ಅಲ್ಲ. ಸ್ವಾತಂತ್ರ್ಯ ಮುಂಚೆ ಮತ್ತು ಈಗಲೂ ಮದ್ಯ ನಿಷೇಧ ಆಗಬೇಕು ಅನ್ನುವ ಕೂಗು ಇದೆ. ಸರ್ಕಾರವೂ ಸಹ ಇದರ ವಿರುದ್ಧ ಇದೆ. ಸಂಪೂರ್ಣ ನಿಷೇಧ ಆಗಬೇಕು ಅನ್ನುವ ನಿಮ್ಮ ಬೇಡಿಕೆ ಈಡೇರಿಕೆಗೆ ತುಂಬಾ ಸವಾಲುಗಳಿವೆ. ನೀವು ಹೇಳಿದ ಹಾಗೆಯೇ ಹಂತ ಹಂತವಾಗಿ ನಿಷೇಧ ಮಾಡುವ ಕೆಲಸವನ್ನು ಸರ್ಕಾದಿಂದ ಮಾಡುತ್ತೇವೆ ಎಂದರು.

ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ಅವಕಾಶ ಕೇಳಿದ್ದೀರಾ? ಅದಕ್ಕೂ ಕೂಡ ನಾವು ವ್ಯವಸ್ಥೆ ಮಾಡಿ ಕೊಡುತ್ತೇವೆ. ಹೋರಾಟ ಹತ್ತಿಕ್ಕುವ ಉದ್ದೇಶ ನಮಗಿಲ್ಲ. ಇದು ಪ್ರಸ್ತುತವಾದ ವಿಚಾರವಾಗಿದೆ. 10 ದಿನಗಳೊಳಗೆ ಸಿಎಂ ಜೊತೆ ಸಭೆ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೋರಾಟಗಾರರಿಗೆ ಡಿಸಿಎಂ ಭರವಸೆ ಕೊಟ್ಟ ನಂತರ ಹೋರಾಟವನ್ನು ಅಂತ್ಯಗೊಳಿಸಿ ಊರಿಗೆ ವಾಪಸ್ಸು ತೆರಳಲು ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದ್ದಾರೆ.

ABOUT THE AUTHOR

...view details