ಬೆಂಗಳೂರು:ರಾಜ್ಯ ಸರ್ಕಾರದಿಂದ ಒಟ್ಟು 3 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್ ಖರೀದಿಸಲಾಗಿದೆ. ಪ್ರತಿ ನಿತ್ಯ 2000 ಟೆಸ್ಟಿಂಗ್ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿ.ಸಿ.ಎಂ ಅಶ್ವಥ್ ನಾರಾಯಣ್ ತಿಳಿಸಿದರು.
ರಾಜ್ಯ ಸರ್ಕಾರದಿಂದ 3 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್ ಖರೀದಿ: ಡಿ.ಸಿ.ಎಂ - Purchase 3 lakh Covid-19 Testing Kit from State Government: DCM Ashwath Narayan
ಲಾಕ್ಡೌನ್ ಸಡಿಲಿಕೆ ಜೊತೆ ಜೊತೆಗೆ ಕೋವಿಡ್-19 ಟ್ರ್ಯಾಕಿಂಗ್ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಸಿ.ಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಇನ್ನು ಪಿ.ಪಿ.ಇ ಕಿಟ್ ಎಲ್ಲಡೆ ಲಭ್ಯವಿಲ್ಲದಿರುವ ಕಾರಣ, 250 ಕಿಯೋಸ್ಕ್ನನ್ನು ದಕ್ಷಿಣ ಕೊರಿಯಾ ರೀತಿ ಸ್ಥಾಪನೆ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 50 ರಿಂದ 100 ಬೆಡ್ ಹಾಗೂ ಆಮ್ಲಜನಕ ವ್ಯವಸ್ಥೆ ಇರಬೇಕು ಎಂದು ಸೂಚಿಸಲಾಗಿದೆ. ಚೀನಾ ದಿಂದ ಮಾಸ್ಕ್ಗಳು, ಟೆಸ್ಟಿಂಗ್ ಕಿಟ್ನಲ್ಲಿ ಪ್ರತೀ ಬಾರಿ ಅನೇಕ ಲೋಪ ದೋಷಗಳು ಕಾಣಿಸುತ್ತಿದೆ. ಹೀಗಾಗಿ ಚೀನಾ ಸರ್ಕಾರ ಯಾವ ಸಂಸ್ಥೆಗಳಿಗೆ ಮಾನ್ಯತೆ ನೀಡಿದೆಯೋ ಆ ಸಂಸ್ಥೆಯಿಂದಲೇ ಮಾಸ್ಕ್, ಟೆಸ್ಟಿಂಗ್ ಕಿಟ್ ಆರ್ಡರ್ ನೀಡಲಾಗಿದೆ. ಈ ತಿಂಗಳ ಒಳಗೆ ರಾಜ್ಯದ ಅಗತ್ಯತೆಗೆ ತಕ್ಕಂತೆ ಮಾಸ್ಕ್ ಹಾಗೂ ಟೆಸ್ಟಿಂಗ್ ಕಿಟ್ ಬರಲಿದೆ.
ಹೊಸ ಹೆಲ್ಪ್ ಲೈನ್: ಏಪ್ರಿಲ್ 22 ರಿಂದ ಒಂದು ಶಿಫ್ಟ್ನಲ್ಲಿ 300 ಉದ್ಯೋಗಿಗಳಂತೆ 2 ಶಿಫ್ಟ್ಗಳಲ್ಲಿ ಕೆಲಸ ಮಾಡುವ ಹೊಸ ಹೆಲ್ಪ್ಲೈನ್ ಪ್ರಾರಂಭಿಸಲಾಗುವುದು. ಈ ಹೊಸ ಹೆಲ್ಪ್ಲೈನ್ ದಿನಕ್ಕೆ ಸುಮಾರು 50,000 ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈಗ 104 ಸಂಖ್ಯೆಗೆ ಬೇರೆ ಕರೆಗಳು ಬರುವ ಕಾರಣ ಹೊಸ ಹೆಲ್ಪ್ಲೈನ್ ಪ್ರಾರಂಭವಾಗಲಿದೆ.