ಕರ್ನಾಟಕ

karnataka

ETV Bharat / state

ಉಪ್ಪು ತಿಂದವರು ನೀರು ಕುಡಿಯುತ್ತಿದ್ದಾರೆ: ಡಿಕೆಶಿ ಕಣ್ಣೀರಿಗೆ ಡಿಸಿಎಂ ಅಶ್ವಥ್​ ನಾರಾಯಣ್​ ಟೀಕೆ - DCM ashwath narayan Controversial talk against DK shivakumar

ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಯಬೇಕು, ಈಗ ಡಿಕೆಶಿ ನೀರನ್ನು ಕುಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕಣ್ಣೀರು ಹಾಕುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್​​​ ನಾರಾಯಣ್ ಟೀಕಿಸಿದ್ದಾರೆ.

ಡಿಕೆಶಿ ವಿರುದ್ಧ ಡಿಸಿಎಂ ವಾಗ್ದಾಳಿ

By

Published : Sep 2, 2019, 8:47 PM IST

ಬೆಂಗಳೂರು:ಮಾಜಿ ಸಿಎಂ ಎಸ್.ಎಂ ಕೃಷ್ಣ ಮನೆಗೆ ಡಿಸಿಎಂ ಡಾ. ಅಶ್ವತ್ಥನಾರಾಯಣ್ ಭೇಟಿ ಮಾಡಿದರು. ಸದಾಶಿವ ನಗರದ ಎಸ್ಎಂಕೆ ನಿವಾಸಕ್ಕೆ ಸೌಹಾರ್ದಯುತ ಭೇಟಿ ನೀಡಿ‌ ಗೌರಿ ಗಣೇಶ ಹಬ್ಬದ ಶುಭ ಕೋರಿದರು.

ಬಳಿಕ ಡಿಸಿಎಂ ಡಾ.‌ಸಿ.ಎನ್. ಅಶ್ವಥ್ ನಾರಾಯಣ್ ಮಾತನಾಡಿ, ಮಾಜಿ ಸಿಎಂ ಎಸ್. ಎಂ ಕೃಷ್ಣ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಬಂದಿದ್ದೆ. ನಿಮ್ಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಬೇಕು ಅಂತಾ ಕೇಳಿದ್ದೇನೆ‌ ಡಿಸಿಎಂ ಆಗಿ ಸಮಾಜಕ್ಕೆ ಉತ್ತಮ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು.

ಸದಾಶಿವ ನಗರದ ಎಸ್ಎಂಕೆ ನಿವಾಸಕ್ಕೆ ಸೌಹಾರ್ದಯುತ ಭೇಟಿ

ಬಿಜೆಪಿ ವಿರುದ್ಧ ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಸಿಎಂ, ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ರಾಜಕೀಯ ಮಾಡುವುದನ್ನು ಬಿಡಬೇಕು ಯಾವುದೇ ಪಕ್ಷದ ಮೇಲೆ ಬೆರಳು ತೋರಿಸಬಾರದು, ಭಾವನಾತ್ಮಕವಾಗಿ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ರು.

ಉಪ್ಪು ತಿಂದವರು ನೀರು ಕುಡಿಯುತ್ತಿದ್ದಾರೆ, ಕಣ್ಣೀರಿನಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ

ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಒಳ್ಳೆಯದು ಮತ್ತು ಕೆಟ್ಟದ್ದು ಏನು ಅನ್ನೋದು ಗೊತ್ತಾಗಬೇಕು, ಅದು ಆಗುತ್ತಿದೆ. ಈವರೆಗೆ ಏನು ಆಗಿದೆ ಅನ್ನೋದು ಸಮಾಜಕ್ಕೆ ಗೊತ್ತಿದೆ. ಇವರು ಬೆಳೆದು ಬಂದ ರೀತಿ, ಮಾಡಿರುವ ಕಾರ್ಯ ಸಮಾಜಕ್ಕೆ ಗೊತ್ತಿದೆ‌. ಅವರು ಮಾಡಿರುವ ಕರ್ಮಗಳಿಗೆಲ್ಲ ಕಾಂಪ್ರಮೈಸ್ ಆದರೆ ಜನ ಎಲ್ಲಿಗೆ ಹೋಗಬೇಕು? ನೀವು ರಾಜಕೀಯ ಯಾಕೆ ಮಾಡ್ತೀರಾ, ಈಗ ಅತ್ತು ಕರೆದು ಮಾಡಿದ್ರೆ ಏನು ಉಪಯೋಗ, ಕಾನೂನಿನ ಅಡಿಯಲ್ಲಿ ವಿಚಾರಣೆಗೆ ಒಳಪಡಬೇಕು ಅಷ್ಟೇ ಎಂದು ಅಶ್ವಥ್​ ನಾರಾಯಣ್​ ಅವರು ಡಿ ಕೆ ಶಿವಕುಮಾರ್​ಗೆ ಟಾಂಗ್​ ಕೊಟ್ಟಿದ್ದಾರೆ.

ABOUT THE AUTHOR

...view details