ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ವೆಂಟಿಲೇಟರ್ ಅಭಾವ ಉಂಟಾಗುತ್ತದೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಭಾರತದಲ್ಲೀಗ ಕೊರೊನಾ ಸೋಂಕು 2ನೇ ಹಂತದಲ್ಲಿದೆ, ಇನ್ನೊಂದು ವಾರದೊಳಗೆ 3ನೆ ಹಂತಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ. ಕೊರೊನಾ ಶ್ವಾಸಕೋಶದ ಸಮಸ್ಯೆ ತಂದೊಡ್ಡುವುದರಿಂದ ನ್ಯುಮೋನಿಯಾ ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಈ ಖಾಯಿಲೆಗೆ ವೆಂಟಿಲೇಟರ್ ಅವಶ್ಯಕ. ಆದರೆ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ವೆಂಟಿಲೇಟರ್ ಅಭಾವ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದರು.
ಸದ್ಯಕ್ಕೆ ಯಾವುದೇ ವೆಂಟಿಲೇಟರ್ ಅಭಾವ ರಾಜ್ಯದಲ್ಲಿ ಇಲ್ಲ, ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕೈಮೀರಿ ಹೋದ ಸಂದರ್ಭದಲ್ಲಿ ಇದೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಬಹುದು, ಈ ಸವಾಲನ್ನು ಎದುರಿಸಲು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ಹೆಚ್ಚು ವೆಂಟಿಲೇಟರ್ ಅಳವಡಿಸಬೇಕು,ಇದಕ್ಕೆ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದ್ರು.