ಬೆಂಗಳೂರು:ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ನಿಧನಕ್ಕೆ ಸಿಎಂ ಬಿಸ್ವೈ ಸಂಪುಟ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಂತಾಪ ಸಂದೇಶದಲ್ಲಿ, ಶ್ರೀಯುತರ ಅಗಲಿಕೆಯಿಂದ ಹಿರಿಯ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದಿದ್ದಾರೆ ಎಂದು ತಿಳಿಸಿದ್ದಾರೆ.
ಓದಿ:ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ : ಆಘಾತ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು
ಆತ್ಮೀಯರಾಗಿದ್ದ ಧರ್ಮೇಗೌಡರು ಆತ್ಮಹತ್ಯೆ ಸುದ್ದಿ ಅತ್ಯಂತ ದುರ್ದೈವದ ಘಟನೆ. ಇದು ನಮ್ಮನ್ನು ಘಾಸಿಗೊಳಿಸಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಕಂಬನಿ ಮಿಡಿದಿದ್ದಾರೆ.
ಕೃಷಿ ಸಚಿವ ಬಿ.ಸಿ ಪಾಟೀಲ್ ಮತ್ತು ಸಚಿವ ಡಾ.ನಾರಾಯಣಗೌಡ, ಧರ್ಮೇಗೌಡ ಅವರ ನಿಧನದ ವಾರ್ತೆ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.