ಗಂಗಾವತಿ: ನಿರಂತರ ಸಾರ್ವಜನಿಕರೊಂದಿಗೆ ಒಡನಾಟದಲ್ಲಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅವರು ಇಂದು ಪ್ರತಿಕಾಯ ಪರೀಕ್ಷೆ (ಆ್ಯಂಟಿ ಬಾಡಿ ಟೆಸ್ಟ್)ಗೆ ಒಳಗಾಗದರು.
ಪ್ರತಿಕಾಯ ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಹಾಜರಾದ ಜಿಲ್ಲಾಧಿಕಾರಿ ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು. ನಂತರ ಸ್ವಯ ಪ್ರೇರಿತರಾಗಿ ಪ್ರತಿಕಾಯ ಪರೀಕ್ಷೆಗೆ ಹಾಜರಾದರು.
ಪರೀಕ್ಷೆಯಲ್ಲಿ ಜಿಲ್ಲಾಧಿಕಾರಿ ಕಿಶೋರ್ ಅವರ ಪರೀಕ್ಷೆ ನೆಗೆಟಿವ್ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಸಿಬ್ಬಂದಿ, 'ದೇಹಕ್ಕೆ ಪ್ರವೇಶಿಸುವ ಯಾವುದೇ ವೈರಾಣುಗಳ ವಿರುದ್ಧ ವ್ಯಕ್ತಿ ದೇಹದಲ್ಲಿರುವ ಬಿಳಿ ರಕ್ತ ಕಣಗಳು ಹೇಗೆ ಸ್ಪಂದಿಸಿ ಹೋರಾಡುತ್ತವೆ ಎಂಬುವುದರ ಬಗ್ಗೆ ಖಚಿತಪಡಿಸಿಕೊಳ್ಳಲು ಈ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ದಿನವೂ ಕರ್ತವ್ಯದ ಹಿನ್ನೆಲೆ ಅನಿವಾರ್ಯವಾಗಿ ಹೊರಗಡೆ ಸುತ್ತಾಡಲೇಬೇಕು. ಸಮಮ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ. ಕೊರೊನಾ ಹಿನ್ನೆಲೆ ಪರೀಕ್ಷೆಗೆ ಒಳಗಾಗಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.