ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಜನರು ಸೇರುತ್ತಾರೆ, ಸಭೆ, ಸಮಾರಂಭ ಅಥವಾ ಹೊಸ ವರ್ಷ ಆಚರಣೆಗೆ ಎಲ್ಲಿ ಜನರು ಗುಂಪುಗೂಡುತ್ತಾರೆ ಅಲ್ಲಿ ಕಣ್ಗಾವಲಿಡಲು ಜಿಲ್ಲಾಡಳಿತದಿಂದ ತಂಡಗಳು ಇದ್ದೇ ಇರುತ್ತವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ನಗರದ ಫ್ರೀಡಂ ಪಾರ್ಕ್ನಲ್ಲಿ ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ನಗರದ ಹೊರವಲಯದಲ್ಲಿ ಪಾರ್ಟಿ, ರೆಸಾರ್ಟ್ಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗಳಲ್ಲಿ ತಂಡಗಳಿದ್ದು, ಅವರು ಪ್ರತೀ ಸ್ಥಳಕ್ಕೆ ಭೇಟಿ ನೀಡಿ, ತಪಾಸಣೆ ನಡೆಸುವುದು, ನಿಗಾವಹಿಸುವ ಕೆಲಸ ಮಾಡಲಾಗುತ್ತಿದೆ. ಬಿಬಿಎಂಪಿ ಹೊರವ್ಯಾಪ್ತಿಯಲ್ಲಿ 36 ಪಿಹೆಚ್ಸಿ, 3 ಸಿಹೆಚ್ಸಿ, 4 ತಾಲೂಕು ಆಸ್ಪತ್ರೆಗಳಿದ್ದು, ಪ್ರತೀ ಆಸ್ಪತ್ರೆ ವ್ಯಾಪ್ತಿಯಲ್ಲಿ ಒಂದೊಂದು ತಂಡ ಕೆಲಸ ಮಾಡುತ್ತಿದೆ. 900 ಗ್ರಾಮಗಳಿದ್ದು, ಪ್ರತೀ ಮನೆಯವರ ಆರೋಗ್ಯ ಸ್ಥಿತಿಗತಿ, ಲಸಿಕೆ ಪೂರೈಕೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಬೆಂಗಳೂರು ಜಿಲ್ಲಾಧಿಕಾರಿ ಹೇಳಿಕೆ