ಬೆಂಗಳೂರು: ತನ್ನ ಮೇಲೆ ಸ್ವಂತ (41 ವರ್ಷ) ತಂದೆಯೇ ಆತ್ಯಾಚಾರ ಮಾಡಿರುವುದಾಗಿ ಆರೋಪಿಸಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ 19 ವರ್ಷದ ಮಗಳು ದೂರು ದಾಖಲಿಸಿದ ಘಟನೆ ನಗರದಲ್ಲಿ ನಡೆದಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ಹರಳೂರಿನಲ್ಲಿ ವಾಸವಾಗಿದ್ದ ರಾಕೇಶ್ ಎಂಬಾತ ಮಗಳ ಮೇಲೆ ಆತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಮಲತಾಯಿಯೊಂದಿಗೆ ರಾಕೇಶ್ ಕುಟುಂಬ ವಾಸವಾಗಿತ್ತು. ಹೀಗಿರಬೇಕಾದರೆ ಇದೇ ತಿಂಗಳು 23 ರಂದು ಮಗಳಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಔಷಧಿ ನೀಡುವ ಬದಲು ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ಮಲಗಿಸಿದ್ದಾನೆ. ಮಾರನೇ ದಿನ ನಸುಕಿನಲ್ಲಿ ಆಕೆಯ ಅಂಗಾಂಗ ಮುಟ್ಟುತ್ತಿರುವುದು ಗೊತ್ತಾಗಿದ್ದು ಆತಂಕದಿಂದ ಎದ್ದು ನೋಡಿದ ಯುವತಿ ತಂದೆ ಪಕ್ಕದಲ್ಲೇ ಮಲಗಿರುವುದನ್ನು ನೋಡಿ ಬೆಚ್ಚಿ ಬೆರಗಾಗಿದ್ದಾಳೆ.