ಕರ್ನಾಟಕ

karnataka

ETV Bharat / state

ಅಂತರ್ಜಾತಿ ವಿವಾಹಕ್ಕೆ ಸಂಘಪರಿವಾರದ ಸಹಮತವಿದೆ: ದತ್ತಾತ್ರೇಯ ಹೊಸಬಾಳೆ

ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹೊಸಬಾಳೆಯವರು 1 ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಪಟ್ಟಿದ್ದರು. ನಂತರದ ದಿನಗಳಲ್ಲಿ ಆರ್​ಎಸ್​​ಎಸ್​​​ನ ಹೊ ವೆ ಶೇಷಾದ್ರಿಯವರು ತುರ್ತು ಪರಿಸ್ಥಿತಿಯ ಕುರಿತಾದ ‘ಭುಗಿಲು’ ಪುಸ್ತಕದ ಕೆಲಸದಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ..

dattatreya-haosabale
ದತ್ತಾತ್ರೇಯ ಹೊಸಬಾಳೆ

By

Published : Mar 20, 2021, 3:10 PM IST

Updated : Mar 20, 2021, 3:20 PM IST

ಬೆಂಗಳೂರು :ಅಂತರ್ಜಾತಿ ವಿವಾಹಕ್ಕೆ ಆರ್​​​ಎಸ್​​ಎಸ್​​​​ನ ಸಹಮತವಿದೆ. ಸಂಘ ಪರಿವಾರದ ಅನೇಕರು ಅಂತರ್ಜಾತಿ ವಿವಾಹವಾಗಿದ್ದಾರೆ. ಹಿಂದೂ ಸಮಾಜ ಒಂದು ಎಂದು ಪ್ರತಿಪಾದನೆ ಮಾಡುತ್ತದೆ ಎಂದು ನೂತನವಾಗಿ ಆಯ್ಕೆಯಾದ ಆರ್​​​ಎಸ್​​​ಎಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಇತ್ತೀಚಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಬ್ರಾಹ್ಮಣ ಸಮಾಜದ ಹೆಣ್ಣುಮಕ್ಕಳಿಗೆ ಅಂತರ್ಜಾತಿ ವಿವಾಹ ಆಗದಂತೆ ತಡೆಯಲು ಸಮಿತಿ ರಚಿಸಬೇಕು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಶ್ರೀಗಳ ಹೇಳಿಕೆ ಪೂರ್ತಿಯಾಗಿ ನೋಡಿಲ್ಲ.

ಅಂತರ್ಜಾತಿ ವಿವಾಹಕ್ಕೆ ಸಂಘಪರಿವಾರದ ಸಹಮತವಿದೆ: ದತ್ತಾತ್ರೇಯ ಹೊಸಬಾಳೆ

ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಪೇಜಾವರ ಹಿಂದಿನ ವಿಶ್ವೇಶ ತೀರ್ಥರು ಅಸ್ಪೃಶ್ಯತೆ ವಿರುದ್ಧ ಹಲವಾರು ಭಾಷಣ ಹಾಗೂ ಕೆಲಸ ಮಾಡಿದ್ದಾರೆ. ಅವರು ನಮಗೆ ಪ್ರೇರಣೆ ಎಂದು ಸಮರ್ಥನೆ ನೀಡಿದರು.

ರಾಮ ಮಂದಿರ ನಿರ್ಮಾಣ ಆರ್​​ಎಸ್​​ಎಸ್ ನಿರ್ಧಾರವಲ್ಲ, ಸಮಾಜದ ಎಲ್ಲಾ ವರ್ಗದ ಜನ ಕೈಜೋಡಿಸುತ್ತಿದ್ದಾರೆ. ಕನ್ನಡ ನನ್ನ ಮಾತೃಭಾಷೆ, ಪ್ರತಿನಿಧಿ ಸಭೆ ಸಾಮಾನ್ಯವಾಗಿ ನಾಗ್ಪುರದಲ್ಲಿ ನಡೆಯುತ್ತದೆ. ಆದರೆ, ಕೊರೊನಾ ಕಾರಣದಿಂದ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಈಗ ನನ್ನ ಮೇಲೆ ಹೊಸ ಜವಾಬ್ದಾರಿ ಇದೆ. ಸಂಘದ ಬಗ್ಗೆ ದೇಶ-ವಿದೇಶಗಳಲ್ಲಿ ಪರಿಚಯವಿದೆ. ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಗಳಿಂದ ಸಾಮಾನ್ಯ ವ್ಯಕ್ತಿಗಳವೆರೆಗೆ ಸಂಘದಲ್ಲಿ ಜನರಿದ್ದಾರೆ ಎಂದಿದ್ದಾರೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಶಾಖೆಗಳು ನಡೆಸುವುದಕ್ಕೆ ಆಗಿಲ್ಲ. ಸಂಘ ಕೋವಿಡ್ ಸಮಯದಲ್ಲಿ ಸೇವೆಯ ರೂಪದಲ್ಲಿ ದಿನಸಿ ಹಾಗೂ ಇನ್ನಿತರೆ ವಸ್ತುಗಳನ್ನ ಜನರಿಗೆ ನೀಡಿದೆ.

ಇದಕ್ಕೆ ನಮಗೆ ಕೃತಜ್ಞತೆ ಬೇಡ. ಸಭೆಯಲ್ಲಿ ಸಮಾಜಕ್ಕೆ ಅಭಿನಂದನೆ ಹಾಗೂ ಕೃತಜ್ಞತೆ ತಿಳಿಸುತ್ತದೆ. ತಪ್ಪುಗಳನ್ನ ನೋಡದೆ, ದೇಶ ಒಂದಾಗಿ ನಿಂತು, ಮಹಾಮಾರಿ ಎದಿರುಸುವುದಕ್ಕೆ ಸಾಧ್ಯವಾಯಿತು. ಈಗಲೂ 2ನೇ ಅಲೆ ಬರುತ್ತಿದ್ದರೂ ದೇಶ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಹೀಗಾಗಿ, ಲಸಿಕೆ ನಮಗೆ ಮಾತ್ರವಲ್ಲದೆ ಬೇರೆ ರಾಷ್ಟ್ರಗಳಿಗೂ ನೀಡಲಾಗುತ್ತಿದೆ.

ಕಳೆದ ವರ್ಷ ಆಗಸ್ಟ್ 5ಕ್ಕೆ ರಾಮಮಂದಿರ ಶಂಕು ಸ್ಥಾಪನೆ ಆಗಿತ್ತು. ಕೊರೊನಾ ನಿಯಮ ಪಾಲಿಸಿ ಶಂಕು ಸ್ಥಾಪನೆ ಮಾಡಲಾಯಿತು. ಈ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಕ್ಕೆ ಆರ್​​ಎಸ್​​​​ಎಸ್ ಭಾಗಿಯಾಗಿದೆ.

ಮೊದಲ ದಿನದಿಂದಲೂ ಆರ್​​ಎಸ್​ಎಸ್ ರಾಮಮಂದಿರ ವಿಷಯ ಪರವಾಗಿ ನಿಂತಿತ್ತು. ಸಮಾಜದಿಂದ ಅದ್ಭುತ ಪ್ರತಿಕ್ರಿಯೆ 12 ಕೋಟಿ ಪರಿವಾರ, 5.5 ಲಕ್ಷ ಊರುಗಳು ಮಂದಿರ ನಿರ್ಮಾಣಕ್ಕೆ ಕೈಜೋಡಿಸಿವೆ. ಅಯೋಧ್ಯೆಗೆ ಹೋಗದೆ ಇರುವವರು ಇದಕ್ಕೆ ಕೈ ಜೋಡಿಸಿದ್ದಾರೆ. ಬಡವರು-ಸಾಹುಕಾರರು ಬೇಧ ಇಲ್ಲದೆ ಹಣ ನೀಡಿದ್ದಾರೆ ಎಂದಿದ್ದಾರೆ.

ದತ್ತಾತ್ರೇಯ ಹೊಸಬಾಳೆ ಪರಿಚಯ :ದತ್ತಾತ್ರೇಯ ಹೊಸಬಾಳೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಸಂಘದ ವಲಯದಲ್ಲಿ ಇವರನ್ನು ಗುರುತಿಸಲಾಗುತ್ತದೆ. 1954ರ ಡಿಸೆಂಬರ್ ‌1ರಂದು ಜನಿಸಿದ ಹೊಸಬಾಳೆ ಅವರು, ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪಡೆದರು. ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ದಾಖಲಾತಿ ಪಡೆದಿದ್ದರು.

ಅಲ್ಲಿ ಅವರಿಗೆ ಸಿಕ್ಕಿದ್ದು ಹೆಚ್.ನರಸಿಂಹಯ್ಯನವರ ಒಡನಾಟ ಮತ್ತು ಮಾರ್ಗದರ್ಶನ. ಸ್ನಾತಕೋತ್ತರ ಪದವಿಯನ್ನು ಇಂಗ್ಲಿಷ್ ಲಿಟರೇಚರ್​​​ನಲ್ಲಿ ಹೊಸಬಾಳೆಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದರು.

1968ರಲ್ಲಿ ಇವರು ಆರ್​ಎಸ್​​ಎಸ್​​​ ಪ್ರವೇಶಿಸಿದರು. 1972ರಲ್ಲಿ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​​ನ ಸದಸ್ಯರಾಗಿ ಅದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ವಿದ್ಯಾರ್ಥಿ ಆಂದೋಲನ ರೂಪಿಸಿದವರು. ಸಂಘಟನೆ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟನಾಕಾರರಾಗಿದ್ದು ಹಲವು ಲೇಖನಗಳನ್ನು ಬರೆದಿದ್ದಾರೆ.

ಕಾಲೇಜು ದಿನಗಳಲ್ಲಿ ಹಾಗೂ ನಂತರದ ದಿನಗಳಲ್ಲೂ ಕನ್ನಡದ ಸಾಹಿತಿಗಳು, ಪತ್ರಕರ್ತರು ಮತ್ತು ಕಲಾವಿದರೊಂದಿಗೆ ನಿಕಟ ಸಂಪರ್ಕವಿದೆ. ವಿಶೇಷವಾಗಿ ಗೋಪಾಲಕೃಷ್ಣ ಅಡಿಗ ಮತ್ತು ಖ್ಯಾತ ಪತ್ರಕರ್ತ ವೈಯೆನ್ಕೆ ಅವರುಗಳ ಜೊತೆಗೆ ಹೊಸಬಾಳೆ ಅವರದ್ದು ವಿಶೇಷ ಒಡನಾಟ.

ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹೊಸಬಾಳೆಯವರು 1 ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಪಟ್ಟಿದ್ದರು. ನಂತರದ ದಿನಗಳಲ್ಲಿ ಆರ್​ಎಸ್​​ಎಸ್​​​ನ ಹೊ ವೆ ಶೇಷಾದ್ರಿಯವರು ತುರ್ತು ಪರಿಸ್ಥಿತಿಯ ಕುರಿತಾದ ‘ಭುಗಿಲು’ ಪುಸ್ತಕದ ಕೆಲಸದಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ.

ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ವೋಸಿ” (World Organization for Student and Youth) ಹಾಗೂ ಇನ್ನಿತರ ಸಂಘಟನೆಗಳು, ಕನ್ನಡದ ಮಾಸ ಪತ್ರಿಕೆ ‘ಅಸೀಮಾ’ ದ ಸಂಸ್ಥಾಪಕರೂ ಆಗಿದ್ದರು.

2004ಕ್ಕೆ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್‌​​ಗೆ ಮರಳಿದ ಹೊಸಬಾಳೆಯವರು, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಆಯ್ಕೆ ಅಗುವ ಮೊದಲು ಇವರು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹರಾಗಿದ್ದರು.

ಇದನ್ನೂ ಓದಿ:‘ಹಿಂದೂ ಸಮಾಜದಲ್ಲಿ ಜಾತಿಯಾಧಾರಿತ ಅಸ್ಪೃಷ್ಯತೆ ದೂರವಾಗಬೇಕೆಂಬುದೇ ಆರ್​ಎಸ್​ಎಸ್​ನ ಸ್ಪಷ್ಟ ನಿಲುವು’

Last Updated : Mar 20, 2021, 3:20 PM IST

ABOUT THE AUTHOR

...view details