ಕರ್ನಾಟಕ

karnataka

ETV Bharat / state

KSOU ಪ್ರವೇಶಾತಿಗೆ ಮತ್ತೊಮ್ಮೆ ದಿನಾಂಕ ವಿಸ್ತರಣೆ - Extension of State Open University on the letter of UGC

ಪ್ರಸಕ್ತ 2020-21ನೇ ಸಾಲಿನ ರಾಜ್ಯ ಮುಕ್ತ ವಿವಿಯ ಪ್ರವೇಶಾತಿಗೆ ಮತ್ತೊಮ್ಮೆ ದಿನಾಂಕ ವಿಸ್ತರಣೆಯಾಗಿದೆ. ಸ್ನಾತಕ/ ಸ್ನಾತಕೋತ್ತರ ಕೋರ್ಸ್​ಗಳಾದ ಬಿಎ/ ಬಿ.ಕಾಂ, ಎಂಎ/ ಎಂಸಿಜೆ/ ಎಂಕಾಂ, ಬಿಎಲ್ಐ, ಎಸ್​ಸಿ ಸೇರಿದಂತೆ ಇತರೆ ಕೋರ್ಸ್ ಗಳಿಗೆ ಅಂತಿಮ‌ ದಿನಾಂಕವನ್ನು ಡಿಸೆಂಬರ್ 31 ರವರೆಗೆ ಮರು ವಿಸ್ತರಿಸಲಾಗಿದೆ.

date-expanded-for-admission-to-state-open-universities
ರಾಜ್ಯ ಮುಕ್ತ ವಿವಿಯ ಪ್ರವೇಶಾತಿಗೆ ಮತ್ತೊಮ್ಮೆ ದಿನಾಂಕ ವಿಸ್ತರಣೆ

By

Published : Dec 9, 2020, 2:34 PM IST

ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಸಕ್ತ 2020-21ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಅಂತಿಮ ದಿನಾಂಕವನ್ನು ಯುಜಿಸಿ ಪತ್ರದ ಮೇರೆಗೆ ಡಿಸೆಂಬರ್ 3ರವರೆಗೆ ವಿಸ್ತರಿಸಲಾಗಿತ್ತು.‌ ಇದೀಗ ಸ್ನಾತಕ/ ಸ್ನಾತಕೋತ್ತರ ಕೋರ್ಸ್​ಗಳಾದ ಬಿಎ/ ಬಿ.ಕಾಂ, ಎಂಎ/ ಎಂಸಿಜೆ/ ಎಂಕಾಂ, ಬಿಎಲ್ಐ, ಎಸ್​ಸಿ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ಅಂತಿಮ‌ ದಿನಾಂಕವನ್ನು ಡಿಸೆಂಬರ್ 31 ರವರೆಗೆ ಮರು ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳು ಮುಕ್ತ ವಿವಿಯ ಅಧಿಕೃತ ವೆಬ್ ಸೈಟ್ ಆಗಿರುವ www.ksoumysuru.ac.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಅದನ್ನು ಡೌನ್ ಲೋಡ್ ಮಾಡಿಕೊಂಡು ಪ್ರಾದೇಶಿಕ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶ ಪಡೆಯಬಹುದು.

ಓದಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರ ಬಾರುಕೋಲು ಚಳವಳಿ

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.25 ರಷ್ಟು‌ವಿನಾಯಿತಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ- ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು. ‌ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಸರ್ಕಾರಿ ರಜೆ ದಿನಗಳಂದು ಮತ್ತು ಭಾನುವಾರಗಳಂದು ಕಚೇರಿ ತೆರೆದಿರಲಿದ್ದು, ಪ್ರವೇಶಾತಿ ಮಾಡಿಕೊಳ್ಳಬಹುದು.

For All Latest Updates

TAGGED:

ABOUT THE AUTHOR

...view details