ಕರ್ನಾಟಕ

karnataka

ETV Bharat / state

Job Alert: ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿದೆ​ ಡಾಟಾ ಎಂಟ್ರಿ ಆಪರೇಟರ್​ ಹುದ್ದೆ - ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ

ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನಿಮಾನ್ಸ್‌ ಈ ಹುದ್ದೆಗಳ ನೇಮಕಾತಿ ನಡೆಸುತ್ತಿದೆ.

Data Entry job in Bangalore Nimahans for contract base
Data Entry job in Bangalore Nimahans for contract base

By

Published : Jul 21, 2023, 11:52 AM IST

ಬೆಂಗಳೂರಿನ ಪ್ರತಿಷ್ಟಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್​) ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್‌ಗಳ​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನ್ಯಾಷನಲ್​ ಸೆಂಟರ್​ ಫಾರ್​ ಡಿಸೀಸ್​ ಇನ್ಫಾರ್ಮೆಟಿಕ್ಸ್​ ಆ್ಯಂಡ್‌​ ರಿಸರ್ಚ್​ (ಎನ್​ಸಿಡಿಐಆರ್​) ಅಡಿಯಲ್ಲಿ ಗುತ್ತಿಗೆ ಆಧಾರದಡಿ ನೇಮಕಾತಿ ನಡೆಯಲಿದೆ. ಒಂದು ವರ್ಷದ ಅವಧಿಗೆ ನೇಮಕಾತಿ ನಡೆಯಲಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ/ ಮಂಡಳಿಯಿಂದ ಪದವಿ ಪೂರ್ಣಗೊಳಿಸರಬೇಕು.

ವಯೋಮಿತಿ: ಗರಿಷ್ಠ ವಯೋಮಿತಿ 40 ವರ್ಷ.

12 ತಿಂಗಳ ಅವಧಿಗೆ ಮಾತ್ರ ನೇಮಕಾತಿ. ಈ ಅವಧಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ 18 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಒಂದು ವರ್ಷ ವಿಸ್ತರಣೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅಧಿಸೂಚನೆ

ಅರ್ಜಿ ಸಲ್ಲಿಕೆ: ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ತಿಗಳು ತಮ್ಮ ಹೊಸ ಅಪ್ಡೇಟೆಡ್‌ ರೆಸ್ಯೂಮ್​, ಶೈಕ್ಷಣಿಕ ದಾಖಲೆ ಸೇರಿದಂತೆ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಈ ಕೆಳಗಿನ ವಿಳಾಸ/ ಇ-ಮೇಲ್​ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ನೋಟಿಫಿಕೇಷನ್​ ಸಂಖ್ಯೆ, ದಿನಾಂಕ, ಇ-ಮೇಲ್​ ಐಡಿ, ಸಂಪರ್ಕ ಸಂಖ್ಯೆ ಮತ್ತು ಅಂಚೆ ವಿಳಾಸವನ್ನು ನಮೂದಿಸಬೇಕು.

ಅರ್ಜಿ ಸಲ್ಲಿಕೆ ವಿಳಾಸ: ನಿರ್ದೇಶಕರು, ನಿಮ್ಹಾನ್ಸ್​, ಪಿ.ಬಿ.ನಂ 2900, ಡಿ.ಆರ್.ಕಾಲೇಜ್​ ಪೋಸ್ಟ್​, ಹೊಸೂರ್​ ರೋಡ್​, ಬೆಂಗಳೂರು- 560029 ಅಥವಾ gbk5000@rediffmail.com ಇ-ಮೇಲ್​ ಮಾಡಬಹುದು.

ಜುಲೈ 19ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ದಿನಾಂಕ ಆಗಸ್ಟ್​ 2 ಕಡೇಯ ದಿನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು ನಿಮ್ಹಾನ್ಸ್​ನ ಅಧಿಕೃತ ಜಾಲತಾಣ nimhans.ac.in ಭೇಟಿ ನೀಡಿ.

ಕ್ಲಿನಿಕಲ್​ ಸೈಂಟಿಸ್ಟ್​ ಹುದ್ದೆಗೆ ಅರ್ಜಿ ಆಹ್ವಾನ:ನಿಮ್ಹಾನ್ಸ್​ನಲ್ಲಿ ಖಾಲಿ ಇರುವ ಕ್ಲಿನಿಕಲ್​ ಸೈಂಟಿಸ್ಟ್​ ಹುದ್ದೆಗೂ ಒಂದು ವರ್ಷದ ಅವಧಿಗೆ ನೇಮಕಾತಿ ನಡೆಸಲಾಗುತ್ತಿದೆ. ಸೈಕಿಯಾಟ್ರಿಕ್ಸ್​ನಲ್ಲಿ ಎಂಡಿ ಪದವಿ ಪೂರೈಸಿದ 50 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಮಾಸಿಕ 1,50,000 ರೂ ವೇತನ ನಿಗದಿಸಲಾಗಿದೆ. ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ ಸೇರಿದಂತೆ ಇನ್ನಿತರ ವಿವರಗಳನ್ನು adbs.project@gmail.com ಇ-ಮೇಲ್​ ವಿಳಾಸಕ್ಕೆ ಆಗಸ್ಟ್​ 3ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ಇದನ್ನೂ ಓದಿ:DEO Jobs: ಎನ್​ಐಎಯಲ್ಲಿ ಡಾಟಾ ಎಂಟ್ರಿ ಆಪರೇಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ABOUT THE AUTHOR

...view details