ಕರ್ನಾಟಕ

karnataka

ETV Bharat / state

ವಸತಿ ಪ್ರದೇಶದಲ್ಲಿ ಬಾರ್ ಓಪನ್.. ಮಹಿಳೆಯರು, ಸ್ಥಳೀಯರಿಂದ ಸ್ಥಗಿತಗೊಳಿಸಿವಂತೆ ಆಗ್ರಹ.. - ಬಾರ್​ ಮುಚ್ಚುವಂತೆ ಮಹಿಳೆಯರ ಪ್ರತಿಭಟನೆ

ಅಬಕಾರಿ, ಬಿಬಿಎಂಪಿ ಅಧಿಕಾರಿಗಳ ನಡೆಗೆ ಹಾಗೂ ವಿರೋಧದ ನಡುವೆಯೂ ಬಾರ್ ತೆರೆಯುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದ್ದಾರೆ. ಪೊಲೀಸರ ಮಾತಿಗೂ ಜಗ್ಗದೆ ಜನರು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ..

dasarahalli-resident-protest-to-close-bar
ವಸತಿ ಪ್ರದೇಶದಲ್ಲಿ ಬಾರ್ ಓಪನ್

By

Published : Oct 17, 2021, 8:04 PM IST

ಬೆಂಗಳೂರು :ವಿರೋಧದ ನಡುವೆಯೂ ಜನವಸತಿ ಪ್ರದೇಶದಲ್ಲಿ ಬಾರ್ ಓಪನ್ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯರು ಹಾಗೂ ಸ್ಥಳೀಯ ನಿವಾಸಿಗಳು ಮದ್ಯದಂಗಡಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆದಿದೆ.

ಮದ್ಯದಂಗಡಿಗೆ ನುಗ್ಗಿ ಮಹಿಳೆಯರು, ಸ್ಥಳೀಯರಿಂದ ಆಕ್ರೋಶ..

ನಗರದ ಟಿ.ದಾಸರಹಳ್ಳಿ ಸಮೀಪದ ಹೆಗ್ಗನಹಳ್ಳಿ ವಾರ್ಡ್​ನ ಗಜಾನನ ನಗರದಲ್ಲಿ ಹೊಸದಾಗಿ ಬಾರ್​ ತೆರೆಯಲಾಗಿದೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಜನವಸತಿ ಪ್ರದೇಶ, ಶಾಲೆ, ದೇವಾಲಯ ಇರುವ ಕಡೆ ಬಾರ್ ಓಪನ್ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಬಕಾರಿ, ಬಿಬಿಎಂಪಿ ಅಧಿಕಾರಿಗಳ ನಡೆಗೆ ಹಾಗೂ ವಿರೋಧದ ನಡುವೆಯೂ ಬಾರ್ ತೆರೆಯುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದ್ದಾರೆ. ಪೊಲೀಸರ ಮಾತಿಗೂ ಜಗ್ಗದೆ ಜನರು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

For All Latest Updates

ABOUT THE AUTHOR

...view details