ಕರ್ನಾಟಕ

karnataka

ETV Bharat / state

ಬೆಂಗಳೂರಿನ ವಿದ್ಯಾಮಾನ್ಯ ಕೇಂದ್ರದಲ್ಲಿ ದಸರಾ ವೈಭವ : ರಾಮಾಯಣ ನೆನಪಿಸುವ ಗೊಂಬೆಗಳ ಕಲರವ

ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿಯು  ರಾಮಾಯಣ ವೈಭವ, ಪಟ್ಟದ ಗೊಂಬೆ, ಶ್ರೀಕೃಷ್ಣ ಲೀಲಾ, ಪುರಿ ಪರಮಪುರುಷ ಜಗನ್ನಾಥ ವೈಭವ, ಭಾರತೀಯ ಬುಡಕಟ್ಟು ಹಾಗೂ ಹಳ್ಳಿಗಳ ಕುರಿತಾದ ಪ್ರದರ್ಶನ ಮತ್ತು ಮೈಸೂರು ದಸರಾ ಮೆರವಣಿಗೆ ಹೀಗೆ ನಮ್ಮ ಸಂಸ್ಕೃತಿಗಳ ಆಚಾರ ವಿಚಾರಗಳನ್ನು ಗೊಂಬೆಗಳ ಪ್ರದರ್ಶನದ ಮೂಲಕ ಪ್ರತಿಬಿಂಬಿಸಲಾಗಿದೆ.

Dasara gombe
ಬೆಂಗಳೂರಿನ ವಿದ್ಯಾಮಾನ್ಯ ಕೇಂದ್ರದಲ್ಲಿ ದಸರಾ ವೈಭವ

By

Published : Sep 26, 2022, 8:48 PM IST

ಬೆಂಗಳೂರು: ನಾಡಹಬ್ಬ ದಸರಾ ಹಬ್ಬದ ಆಚರಣೆಗೆ ಸೋಮವಾರದಿಂದ ಚಾಲನೆ ದೊರಕ್ಕಿದ್ದು ರಾಜಧಾನಿಯಲ್ಲಿ ವೈವಿಧ್ಯಮಯ, ಆಕರ್ಷಕ ಗೊಂಬೆಗಳ ಪ್ರದರ್ಶನ ಆರಂಭಗೊಂಡಿದೆ. ವಿದ್ಯಾಮಾನ್ಯ ನಗರದ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ಹಬ್ಬದ ಸೌಂದರ್ಯ ಕಳೆಕಟ್ಟಿದೆ. ಇಲ್ಲಿ ವಿಶೇಷನಾಗಿ ದಸರಾ ಗೊಂಬೆಗಳ ಪ್ರದರ್ಶನದಲ್ಲಿ ಭಾರತೀಯ ಸಂಸ್ಕೃತಿ, ಆಚರಣೆ ಹಾಗೂ ಮೌಲ್ಯಗಳು ಅನಾವರಣಗೊಂಡಿವೆ.

ಸಂಪೂರ್ಣ ರಾಮಾಯಣ

ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿಯು ರಾಮಾಯಣ ವೈಭವ, ಪಟ್ಟದ ಗೊಂಬೆ, ಶ್ರೀಕೃಷ್ಣ ಲೀಲಾ, ಪುರಿ ಪರಮಪುರುಷ ಜಗನ್ನಾಥ ವೈಭವ, ಭಾರತೀಯ ಬುಡಕಟ್ಟು ಹಾಗೂ ಹಳ್ಳಿಗಳ ಕುರಿತಾದ ಪ್ರದರ್ಶನ ಮತ್ತು ಮೈಸೂರು ದಸರಾ ಮೆರವಣಿಗೆ ಹೀಗೆ ನಮ್ಮ ಸಂಸ್ಕೃತಿಗಳ ಆಚಾರ ವಿಚಾರಗಳನ್ನು ಗೊಂಬೆಗಳ ಪ್ರದರ್ಶನದ ಮೂಲಕ ಪ್ರತಿಬಿಂಬಿಸಲಾಗಿದೆ.

ಸಂಪೂರ್ಣ ರಾಮಾಯಣ


ಸಂಪೂರ್ಣ ರಾಮಾಯಣದ ಅಂದರೆ, ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶರ ಜನನ, ಲವಕುಶ ಪಟ್ಟಾಭೀಷೇಕ ಗೊಂಬೆಗಳು, ಮೈಸೂರ ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ತೋಪುಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ನೋಡುಗರನ್ನು ಆಕರ್ಷಿಸುತ್ತಿವೆ.

ವಿಶೇಷನಾಗಿ ದಸರಾ ಗೊಂಬೆಗಳ ಪ್ರದರ್ಶನ

ಕಳೆದ ಏಳು ವರ್ಷಗಳಿಂದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಆಡಳಿತ ಮಂಡಳಿಯ ಮುಖಸ್ಥರಾದ ಸೌಂದರ್ಯ ರಮೇಶ್ ಮತ್ತು ಸೌಂದರ್ಯ ಭರತ್ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ


ಈ ಬಾರಿ ಸಂಪೂರ್ಣ ರಾಮಾಯಣ, ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಷಗಳು, ಪೂರಿ ಜಗನ್ನಾಥ ರಥಯಾತ್ರೆ, ಮೈಸೂರು ದಸರಾ ಪ್ರದರ್ಶನ ಮಾಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ದಸರಾವನ್ನು ಸಂಭ್ರಮಿಸೋಣ ಎಂದು ವಿದ್ಯಾಮಾನ್ಯ ವಿದ್ಯಾ ಕೇಂದ್ರ ಪ್ರಾಂಶುಪಾಲೆ ಶಾರದಾ ಅವರು ಮನವಿ ಮಾಡಿಕೊಂಡಿದ್ದಾರೆ.

ರಾಮಾಯಣ ವೈಭವ, ಪಟ್ಟದ ಗೊಂಬೆ, ಶ್ರೀಕೃಷ್ಣ ಲೀಲಾ

ವಿಶಿಷ್ಟವಾಗಿರುವ ಈ ಬೊಂಬೆ ಪ್ರದರ್ಶನ ಅಕ್ಟೋಬರ್ 5ರವರೆಗೆ ಇರಲಿದ್ದು ಸಾರ್ವಜನಿಕರು . ಬೆಳಗ್ಗೆ 9.30 ರಿಂದ ಸಂಜೆ 6.30 ರವರೆಗೂ ಬೊಂಬೆಗಳನ್ನು ವೀಕ್ಷಿಸಬಹುದಾಗಿದೆ.

ರಾಮಾಯಣ ನೆನಪಿಸುವ ಗೊಂಬೆಗಳ ಕಲರವ

ಇದನ್ನು ಓದಿ:ರತ್ನಖಚಿತ ಸಿಂಹಾಸನದಲ್ಲಿ ರಾಜ ವಂಶಸ್ಥರ ಖಾಸಗಿ ದರ್ಬಾರ್ : ವಿಡಿಯೋ ನೋಡಿ

ABOUT THE AUTHOR

...view details