ಕರ್ನಾಟಕ

karnataka

ದಸರಾ ಮಹೋತ್ಸವ: ಉನ್ನತ ಮಟ್ಟದ ಸಭೆಯ ಕಾರ್ಯಸೂಚಿಯಲ್ಲಿ ದಿನಾಂಕ ದೋಷ

By

Published : Jul 19, 2022, 9:12 PM IST

ಇತ್ತೀಚಿನ ಸರ್ಕಾರಿ‌ ಆದೇಶದಲ್ಲಿ ಅಕ್ಷರ ದೋಷ ಕಂಡುಬಂದ ಬೆನ್ನಲೇ ಇದೀಗ, ದಸರಾ ಸಭೆ ಕಾರ್ಯಸೂಚಿಯಲ್ಲಿ ದಿನಾಂಕ ದೋಷ ಕಂಡುಬಂದಿದೆ.

Date error in high-level meeting agenda
ಉನ್ನತ ಮಟ್ಟದ ಸಭೆಯ ಕಾರ್ಯಸೂಚಿಯಲ್ಲಿ ದಿನಾಂಕ ದೋಷ

ಬೆಂಗಳೂರು: ದಸರಾ ಮಹೋತ್ಸವ ಉನ್ನತ ಮಟ್ಟದ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಸರ್ಕಾರ ಎಡವಟ್ಟು ಮಾಡಿದೆ. ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆ ಕಾರ್ಯಸೂಚಿಯಲ್ಲಿ 19.07.2021 ಎಂದು ದಿನಾಂಕ ನಮೂದಿಸಲಾಗಿದೆ. 19.07.2022 ಇಂದಿನ ಸಭೆಯ ದಿನಾಂಕದ ಬದಲಾಗಿ ಕಳೆದ ವರ್ಷದ ಯಥಾವತ್ತು ಪ್ರಿಂಟ್ ಮಾಡಲಾಗಿದೆ.

ದಸರಾ ಉತ್ಸವ-2012 ಎಂದು ತಪ್ಪಾಗಿ ಬರೆಯಲಾಗಿದೆ

ಅಂತೆಯೇ ಮುಖ್ಯಮಂತ್ರಿ ಮಾಧ್ಯಮ ಸಂಚಾಲಕರು ಕಳುಹಿಸಿರುವ ಮಾಹಿತಿ, ಸುದ್ದಿ ಗ್ರೂಫ್​ನಲ್ಲಿಯೂ ಮತ್ತೊಂದು ಮಹಾ ಎಡವಟ್ಟು ಮಾಡಲಾಗಿದೆ. ದಸರಾ ಉತ್ಸವ-2012 ಎಂದು ಮತ್ತೊಂದು ತಪ್ಪು ಎಸಗಲಾಗಿದೆ. ಆವತ್ತು ಸರ್ಕಾರಿ‌ ಆದೇಶದಲ್ಲಿ ಅಕ್ಷರ ದೋಷ, ಇವತ್ತು ದಿನಾಂಕ ದೋಷವಾಗಿದೆ. ದಸರಾ ಉನ್ನತ ಮಟ್ಟದ ಸಭೆಯ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪುಸ್ತಕದಲ್ಲಿ ಇಸವಿ ದೋಷ ಮಾಡಿ ಎಡವಟ್ಟು ಮಾಡಿದೆ.

2022 ರ ನಾಡಹಬ್ಬದ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪುಸ್ತಕದಲ್ಲಿ 2022 ರ ಬದಲು 2021 ಅಂತ ಮುದ್ರಣ ಮಾಡಿದೆ. ಮೊನ್ನೆ ಆದೇಶ ಪ್ರತಿಯಲ್ಲಿನ ಕನ್ನಡ ಕಾಗುಣಿತ ಎಡವಟ್ಟು ಪ್ರಕರಣ ಮರೆಯಾಗುವ ಮುನ್ನವೇ ಇಂತಹ ಪ್ರಮಾದಗಳು ಪದೇ ಪದೆ ನಡೆಯುತ್ತಿರುವುದು ನಿಜಕ್ಕೂ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ವಿಷಯವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಆದೇಶದಲ್ಲಿ ತಪ್ಪಾಗಿ ಕನ್ನಡ ಪದ ಬಳಕೆ: ನೆಟ್ಟಿಗರ ಆಕ್ರೋಶದಿಂದ ಎಚ್ಚೆತ್ತ ಸರ್ಕಾರ

ABOUT THE AUTHOR

...view details