ಕರ್ನಾಟಕ

karnataka

ETV Bharat / state

ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ದ ದರ್ಶನ್ ಅಭಿಮಾನಿಗಳ ಆಕ್ರೋಶ - ETv Bharat kannada news

ನಟ ದರ್ಶನ್​ ವಿಚಾರವಾಗಿ ತಟಸ್ಥ ನಿಲುವು ತಳೆದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ದ ಅವರ ಅಭಿಮಾನಿಗಳು ಇಂದು ಆಕ್ರೋಶ ವ್ಯಕ್ತಪಡಿಸಿದರು.

Actor Darshan fans took to the streets and protested
ನಟ ದರ್ಶನ್ ಅಭಿಮಾನಿಗಳು ರಸ್ತೆಗಿಳಿದು ಪ್ರತಿಭಟನೆ

By

Published : Dec 23, 2022, 9:25 PM IST

ಕೆ.ಆರ್.ಪುರ (ಬೆಂಗಳೂರು): ನಟ ದರ್ಶನ್​ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್​ಸಿಸಿ) ನಿಲುವು ಖಂಡಿಸಿ ಇಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ಕೆ.ಆರ್.ಪುರ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಘಟಿಸಿದ ದುರ್ಘಟನೆಯಿಂದ ಸ್ಯಾಂಡಲ್‌ವುಡ್‌ ಮತ್ತು ಅಭಿಮಾನಿ ಬಳಗ ದರ್ಶನ್‌ ಬೆನ್ನಿಗೆ ನಿಂತಿದೆ. ಆದರೆ, ಇದುವರೆಗೂ ಕೆಎಫ್​ಸಿಸಿ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅಭಿಮಾನಿ ಬಳಗದ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡಿಗನಿಗೆ ಕನ್ನಡ ನೆಲೆದಲ್ಲೇ ಅಪಮಾನ ಆಗಿದೆ ಅನ್ನೋದು ಅಭಿಮಾನಿಗಳ ಆಕ್ರೋಶ. ದರ್ಶನ್ ಅವರನ್ನು ಅಪಮಾನ ಮಾಡಿದವರನ್ನು ಶೀಘ್ರವೇ ಬಂಧಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಹೊಸಪೇಟೆ ಚಲೋ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಘಟನೆಯ ಹಿನ್ನೆಲೆ: ಡಿಸೆಂಬರ್ 18ರಂದು ಹೊಸಪೇಟೆಯ ವಾಲ್ಮೀಕಿ ಸರ್ಕಲ್​ನಲ್ಲಿ ಕ್ರಾಂತಿ ಚಿತ್ರ ತಂಡದಿಂದ ಗೊಂಬೆ ಗೊಂಬೆ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಕೆಲ ಕಿಡಿಗೇಡಿಗಳು ಅವಮಾನಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ನಿಮ್ಮ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ: ನಟ ದರ್ಶನ್

ABOUT THE AUTHOR

...view details